ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

0

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.   

ಮುಖ್ಯ ಅತಿಥಿ ಕೆಯ್ಯೂರ್ ಕೆ. ಪಿ.ಎಸ್ ದೈಹಿಕ  ಶಿಕ್ಷಣ ಶಿಕ್ಷಕ ನವೀನ್ ಕುಮಾರ್  ರೈ. ಕೆ ಮಾತನಾಡಿ “ಹಾಕಿ ಕ್ರೀಡೆ” ದಂತಕಥೆ ಮೇಜರ್ ಧ್ಯಾನ್ ಚಂದ್  ಅವರ  ಜನ್ಮ ದಿನವನ್ನು  ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಗಸ್ಟ್ 29 ನ್ನು ಆಚರಿಸಲಾಗುತ್ತದೆ . ವ್ಯಕ್ತಿಯ  ದೈಹಿಕ ಮತ್ತು  ಮಾನಸಿಕ  ಬೆಳವಣಿಗೆಯಲ್ಲಿ  ಕ್ರೀಡೆಯು  ವಹಿಸುವ ಮಹತ್ತರ  ಪಾತ್ರದ  ಬಗ್ಗೆ  ಜಾಗೃತಿ ಮೂಡಿಸಲು  ಈ ದಿನವನ್ನು ಆಚರಿಸಲಾಗುತ್ತದೆ .ಕ್ರೀಡೆಯು  ವಿದ್ಯಾರ್ಥಿಗಳು  ಮಾನಸಿಕ ಒತ್ತಡ ವನ್ನು  ಕಡಿಮೆ ಮಾಡಿ ಉತ್ಸಾಹ  ಮೂಡಿಸುತ್ತದೆ.  ಆಟ  ,ಪಾಠಗಳ  ಜೊತೆಗೆ ಧ್ಯಾನ ಮಾಡುವುದರಿಂದ ಏಕಾಗ್ರತೆ, ಸಹನೆ  ಮತ್ತು ಸದಾ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ ಎಂದರು.

  ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ  ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾವು  ನಮ್ಮ  ದೇಶದ ಅಪ್ರತಿಮ  ಕ್ರೀಡಾಪಟುವಿನ ಜನ್ಮದಿನವನ್ನು  ದೇಶದ ಕ್ರೀಡಾ ದಿನವನ್ನಾಗಿ  ಆಚರಿಸುವುದು ಪ್ರತಿಯೊಬ್ಬ ಕ್ರೀಡಾ ಪಟುವಿಗೆ  ಅಭಿಮಾನದ ವಿಷಯ . ವಿದ್ಯಾರ್ಥಿಗಳು  ವಿವಿಧ ಕ್ರೀಡೆಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡಿರಬೇಕು.  ಸ್ಪರ್ಧಾತ್ಮಕ  ಯುಗದಲ್ಲಿ  ತಮ್ಮ  ಅರ್ಹತೆಯನ್ನು   ದ್ವಿಗುಣಗೊಳಿಸಲು ಪಠ್ಯೇತರ ಚಟುವಟಿಕೆಗಳಲ್ಲಿ  ತಮ್ಮ  ಸಾಧನೆಯು ಅತೀ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್  ಟಿ ಎ , ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ  ಜೀವನ್, ಕ್ರೀಡಾ ಕಾರ್ಯದರ್ಶಿ ವಿಸ್ಮಿತ  ಅಂತಿಮ  ಪದವಿ ವಾಣಿಜ್ಯ ವಿಭಾಗ ಉಪಸ್ಥಿತರಿದ್ದರು .

 ಕಾರ್ಯಕ್ರಮದಲ್ಲಿ ಮೋಕ್ಷ ಪ್ರಥಮ ಫ್ಯಾಷನ್ ಡಿಸೈನ್ ವಿಭಾಗ ಪ್ರಾರ್ಥಿಸಿ  ಮತ್ತು ಕಾಲೇಜಿನ ದೈಹಿಕ  ಶಿಕ್ಷಣ ನಿರ್ದೇಶಕ ನವೀನ್ ಸ್ವಾಗತಿಸಿ,  ಬಿ ಎಚ್. ಎಸ್  ವಿಭಾಗದ ಉಪನ್ಯಾಸಕಿ ಶ್ರುತ ವಂದಿಸಿ,  ಫ್ಯಾಷನ್ ಡಿಸೈನ್ ವಿಭಾಗದ  ಉಪನ್ಯಾಸಕಿ ಧನ್ಯಶ್ರೀ  ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here