ಸವಣೂರು:ವಿದ್ಯಾರಶ್ಮಿಯಲ್ಲಿ ವನಮಹೋತ್ಸವ

0

ಸವಣೂರು: ಇಲ್ಲಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರೋಟರಿ ಕ್ಲಬ್ ಎಲೈಟ್ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಸಂಚಾಲಕರಾದ ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪರಿಸರ ಪ್ರೀತಿ ಇದ್ದರೆ ಸಮಾಜ ಸ್ಪಸ್ಥವಾಗಿರುತ್ತದೆ ಮತ್ತು ಪರಿಸರ ಪ್ರಜ್ಞೆಯು ಶುಧ್ಧ ವಾತಾವರಣ ಮತ್ತು ಉದ್ಯೋಗ ಪಡೆಯುವುದಕ್ಕೂ ಸಹಕಾರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯವರಾಗಿದ್ದ ಪುತ್ತೂರಿನ ಸಹಾಯಕ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಅವರು ಮಾತನಾಡಿ, ಗಿಡ ಮರಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವಂತೆ ಕರೆ ನೀಡಿ ಹಸಿರು ಇದ್ದಲ್ಲಿ ಹೇಗೆ ವಾತಾವರಣದ ಸಮತೋಲನ ಇರುತ್ತದೆ ಎಂದು ತಿಳಿಸಿದರು. ಮತ್ತೋರ್ವ ಅತಿಥಿ ಮಂಗಳೂರಿನ ಸಹಾಯಕ ಸಂರಕ್ಷಣಾಧಿಕಾರಿ ಕಾರ್ಯಪ್ಪ ಅವರು ಮಾತನಾಡಿ ಹೇಗೆ ಮತ್ತು ಯಾಕೆ ಎಳವೆಯಲ್ಲಿಯೇ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.

ಸಭಾಧ್ಯಕ್ಷತೆಯನ್ನು ಆಡಳಿತಾಧಿಕಾರಿ ಮತ್ತು ರೋಟರಿ ಕ್ಲಬ್ ಎಲೈಟ್ ಪುತ್ತೂರು ಇದರ ಅಧ್ಯಕ್ಷರೂ ಆಗಿರುವ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ವಹಿಸಿದ್ದರು. ರೋಟರಿ ಕ್ಲಬ್’ನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಮತ್ತು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ. ನಾರಾಯಣ ಮೂರ್ತಿ, ಸೀತಾರಾಮ ಕೇವಳ ಮತ್ತು ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿಯ ಯಶಸ್ವಿ ರೈ ನಿರೂಪಿಸಿದ ಕಾರ್ಯಕ್ರಮದಲ್ಲಿ 10ನೇ ತರಗತಿಯ ಲಾಸ್ಯ ಮತ್ತು ಬಳಗದವರು ಪ್ರಾರ್ಥನೆ, 9ನೇ ತರಗತಿಯ ಫಾತಿಮಾತ್ ಹನಾ ಸಂವಿಧಾನ ಪೀಠಿಕೆ ವಾಚನ, 10ನೇ ತರಗತಿಯ ಆಯಿಷತ್ ಹನಾ ಸ್ವಾಗತ ಮತ್ತು 9ನೇ ತರಗತಿಯ ಶಂತನು ಕೃಷ್ಣ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು.

LEAVE A REPLY

Please enter your comment!
Please enter your name here