ಟೇಬಲ್ ಟೆನ್ನಿಸ್ ಪಂದ್ಯಾಟ: ಫಿಲೋಮಿನಾ ಪಿ.ಯು. ಕಾಲೇಜಿನ ನಿಹಾಲ್ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ  ಮಂಗಳೂರು ಹಾಗೂ ಗೋವಿಂದದಾಸ್ ಪ. ಪೂ ಕಾಲೇಜು ಸುರತ್ಕಲ್ ಇದರ ಆಶ್ರಯದಲ್ಲಿ ಆ30 ರಂದು ಗೋವಿಂದದಾಸ್ ಪ. ಪೂ ಕಾಲೇಜು ಸುರತ್ಕಲ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ  ಕಾಲೇಜುಗಳ  ಬಾಲಕ-ಬಾಲಕಿಯರ ‘ಟೇಬಲ್ ಟೆನ್ನಿಸ್ ಪಂದ್ಯಾಟ 2024 – 25’ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನ (St. Philomena Pre University College)  ಪ್ರಥಮ ವಾಣಿಜ್ಯ ವಿಭಾಗದ ನಿಹಾಲ್  ಚಿಕ್ಕಮಂಗಳೂರಿನಲ್ಲಿ ನಡೆಯಲಿರುವ  ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗೆ  ಆಯ್ಕೆಯಾಗಿರುತ್ತಾರೆ.

ಇವರು ಪುತ್ತೂರು  ಆರ್ಯಪು ನಿವಾಸಿ  ಉಮೇಶ್ ಸುವರ್ಣಮತ್ತು ಮೋಹಿನಿ ದಂಪತಿಗಳ ಪುತ್ರ. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here