ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

0

ಪುತ್ತೂರು : ದೈಹಿಕವಾಗಿ ನಾವು ಕ್ಷಮತೆಯಲ್ಲಿದ್ದರೆ ಮಾನಸಿಕವಾಗಿಯೂ ಕ್ಷಮತೆಯಲ್ಲಿರಲು ಸಾಧ್ಯ.ದೈಹಿಕ ಸದೃಢತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜೀವನ ದಾರಿ ಕಲ್ಪಿಸುತ್ತದೆ ಎಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ಹೇಳಿದರು.

ಅವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಸೆ.2ರಂದು  ದ.ಕ.ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಮಣಿಕ್ಕರ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಹಾಗೂ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.ಅಲ್ಲದೇ ಮಣಿಕ್ಕರ ಪ್ರೌಢಶಾಲಾಭಿವೃದ್ದಿ ಸಮಿತಿಯವರ ಮನವಿಯಂತೆ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಚಟುವಟಿಕೆಗಳಿಗೆ ಪೂರಕವಾಗಿ ರಂಗಮಂದಿರ ನಿರ್ಮಾಣಕ್ಕೆ ಸಹಕರಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಮಾತನಾಡಿ, ಮಣಿಕ್ಕರದಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೂ ಅದು ಯಶಸ್ವಿಯಾಗುತ್ತದೆ.ಇಲ್ಲಿನ ಜನರ ಸಹಕಾರ ಮಾದರಿಯಾಗಿದೆ.ಈ ಭಾಗದ ಜನತೆ ಶಿಕ್ಷಣ ಸಂಸ್ಥೆಗಳ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಅಭಿಮಾನ ಶ್ಲಾಘನೀಯ ಎಂದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಅವರು ಮಾತನಾಡಿ, ಮಣಿಕ್ಕರ ಪ್ರೌಢಶಾಲೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದಿದೆ ಎಂದರು.

ವೇದಿಕೆಯಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಶುಭಲತಾ ಜೆ.ರೈ ,ಸುಂದರ ಪಿ.ಬಿ.,ಕಾವು ಕ್ಲಸ್ಟರ್ ಸಿಆರ್‌ಪಿ ಪ್ರಸಾದ್ ಕೆ.ವಿ.ಎಲ್.ಎನ್.,ಪಂದ್ಯಾಟ ಸಮಿತಿಯ ಅಧ್ಯಕ್ಷ ಎನ್.ಎಸ್‌.ವೆಂಕಪ್ಪ ಗೌಡ ನಾರ್ಕೋಡು ಪೆರ್ಜಿ,ಶಾಲಾಭಿವೃದ್ದಿ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಸುನೀಲ್ ರೈ ಪಾಲ್ತಾಡು, ಕೊಳ್ತಿಗೆ ಗ್ರಾ.ಪಂ.ಮಾಜಿ ಸದಸ್ಯ ಸುಂದರ ಪೂಜಾರಿ, ಪಾಲ್ತಾಡು ಶ್ರೀ ವಿಷ್ಣುಮಿತ್ರ ವೃಂದದ ಅಧ್ಯಕ್ಷ ದೇವಿಪ್ರಸಾದ್ ,ಮಣಿಕ್ಕರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಕೆ.,ಮಣಿಕ್ಕರ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ಮಹಾಲಿಂಗೇಶ್ವರ ಎಂ.,ಮಣಿಕ್ಕರ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ  ಅಬ್ದುಲ್ ರಹೀಂ,ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ,ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸಹದೇವ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್ ಎಂ.,ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ,ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ,ದೇವಕಿ ಸುಂದರ ನಾಯ್ಕ ನಾಗಮಜಲು,ನಿವೃತ್ತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಚಳ್ಳ ಶ್ರೀಧರ ಪುಚ್ಚಪ್ಪಾಡಿ,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ ಪುತ್ತೂರು, ಮಣಿಕ್ಕರ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಇಬ್ರಾಹಿಂ ಎ.,ಕಾಸಿಂ ಸಾಹೇಬ್ ಪಾಲ್ತಾಡು,ಪಂದ್ಯಾಟದ ಆಹಾರ ಸಮಿತಿ ಅಧ್ಯಕ್ಷ ಸುಂದರ ನಾಯ್ಕ ನಾಗನಮಜಲು, ಚೆನ್ನಾವರ ಅಭ್ಯುದಯ ಯುವಕ ಮಂಡಲದ ಪ್ರವೀಣ್ ಚೆನ್ನಾವರ, ಮಣಿಕ್ಕರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಳಿನಿ ಕೆ.,ವಿದ್ಯಾರ್ಥಿ ನಾಯಕ ಮಹಮ್ಮದ್ ಐರಾಝ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಸಲಾಂ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ : ಶೃಂಗಾರ್ ಸ್ಟುಡಿಯೋ ಬೆಳ್ಳಾರೆ

ಸನ್ಮಾನ
ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಮಣಿಕ್ಕರ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶಟರ್ ಅನಾವರಣ
ಮಹಮ್ಮದ್ ರಫೀಕ್ ಪಾಲ್ತಾಡು ಅವರು ಶಾಲಾ ಕೊಠಡಿಗೆ ಕೊಡುಗೆಯಾಗಿ ನೀಡಿದ ಶಟರ್ ಅನ್ನು ಅತಿಥಿಗಳು ಅನಾವರಣ ಮಾಡಿದರು.

ಕೈ ತೊಳೆಯುವ  ಬೇಸಿನ್ ಶಾಲಾರ್ಪಣೆ
ರವಿಪ್ರಸಾದ್ ಆಳ್ವ ಪಾಲ್ತಾಡು ಅವರು ಕೊಡುಗೆಯಾಗಿ ನೀಡಿದ ಕೈ ತೊಳೆಯುವ ಕಾಂಕ್ರೀಟಿಕೃತ ಬೇಸಿನ್ ಅನ್ನು ಶಾಲಾರ್ಪಣೆ ಮಾಡಲಾಯಿತು.

ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಸಯ್ಯದ್ ಗಫೂರ್ ಸಾಹೇಬ್ ಪಾಲ್ತಾಡು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ಶಿಕ್ಷಕಿ ಗೀತಾ ಜಯರಾಮ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ಅವರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ಉಮಾವತಿ ಎಲ್.,ಸುಗುಣ,ಉಷಾ ನಾಯ್ಕ,ವಸಂತಿ ಕೆ.,ಪವಿತ್ರ ಕರುಣಾಕರ ಸಹಕರಿಸಿದರು.

ಜುಬೈರ್ ,ಹರೀಶ್, ಸಂಶದ್ ಬೇಗಂ,ಶರೀಫ್ ,ಅವಿನಾಶ್, ಮಧುಸೂದನ್, ಮಾಧವ,ಶಹನಾಝ್,ಸಾಬ್‌ಜಾನ್ ಸಾಹೇಬ್, ಗಿರೀಶ್, ಸುಂದರ, ಜಗನ್ನಾಥ ರೈ ಮಣಿಕ್ಕರ, ಅಶ್ವಿನ್ ,ಎಂ.ಎಸ್.ಕೊರಗಪ್ಪ,ಅಶ್ವಥ್, ಗೀತಾ,ಮೋನಪ್ಪ ಅವರು ಅತಿಥಿಗಳನ್ನು ಗೌರವಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆಗೆ ಅತಿಥಿಗಳಿಂದ ಶ್ಲಾಘನೆ
ಕಾರ್ಯಕ್ರಮದ ಅಚ್ಚುಕಟ್ಟಾದ ವ್ಯವಸ್ಥೆಗೆ ಅತಿಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪ್ರಾಯೋಜಕರಾಗಿ ಸಹಕಾರ ನೀಡಿದವರನ್ನು ,ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here