ಸೆ.5: ಆರ್ಲಪದವು ನೂತನ ದೈವಸ್ಥಾನದ ದಾರಂದ ಮುಹೂರ್ತ, ನಿಧಿಕುಂಭ ಸಮರ್ಪಣೆ

0

ಪಾಣಾಜೆ: ಇಲ್ಲಿನ ಆರ್ಲಪದವು ಶ್ರೀ ಕಿನ್ನಿಮಾಣಿ-ಪೂಮಾಣಿ, ಹುಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ನೂತನ ದೈವಸ್ಥಾನದ ದಾರಂದ ಮುಹೂರ್ತ ಮತ್ತು ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ವೇ.ಮೂ. ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಸೆ. 5 ರಂದು ನಡೆಯಲಿದೆ. ಬೆಳಿಗ್ಗೆ 8.01 ರ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ದಾರಂದ ಮುಹೂರ್ತ ಮತ್ತು ನಿಧಿಕುಂಭ ಸಮರ್ಪಣೆ ಜರಗಲಿದೆ.


ಪುತ್ತೂರಿನ ಶಾಸಕ ಅಶೋಕ್‌ ಕುಮಾರ್‌ ರೈ ನಿಧಿಕುಂಭ ಸಮರ್ಪಣೆಗೆ ಚಾಲನೆ ನೀಡಲಿದ್ದಾರೆ. ಪುತ್ತೂರು ಸಚಿನ್‌ ಟ್ರೇಡರ್ಸ್‌ನ ಮ್ಹಾಲಕ ಮಂಜುನಾಥ ನಾಯಕ್‌ ದಾರಂತ ಮುಹೂರ್ತ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಸುಬೋಧ ಪ್ರೌಢಶಾಲೆಯ ಸಂಚಾಲಕ ಮಹಾಬಲೇಶ್ವರ ಭಟ್‌ ಗಿಳಿಯಾಲು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ನಿವೃತ್ತ ಶಿಕ್ಷಕ ವೆಂಕಟ್ರಮಣ ಭಟ್‌ ಕೊಂದಲ್ಕಾನ, ಬೆಟ್ಟಂಪಾಡಿ ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್‌ ಬ್ರಹ್ಮರಗುಂಡ, ನಿರ್ದೇಶಕ ತಿಮ್ಮಣ್ಣ ರೈ ಆನಾಜೆ, ಪ್ರಗತಿಪರ ಕೃಷಿಕ ಆನಂದ ರೈ ಸೂರಂಬೈಲು, ಸಾಫ್ಟ್‌ವೇರ್‌ ಇಂಜಿನಿಯರ್‌ ಭಾಸ್ಕರ ರೈ ಪಡ್ಯಂಬೆಟ್ಟು, ಉದ್ಯಮಿ ಬಾಲಕೃಷ್ಣ ರೈ, ವಿಜಯಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಹರಿಶ್ಚಂದ್ರ ಪಕ್ಕಳ, ಕೆವಿಜಿ ಶಿಕ್ಷಣ ಸಂಶ್ಥೆಯ ಲೀಲಾಧರ ಗೌಡ, ಶೈಲಿನಿ ಭಾಸ್ಕರ್‌ ಸೇಮಿತ ಕೆದಂಬಾಡಿ, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕೆಎಂಎಫ್‌ ನಿರ್ದೇಶಕ ನಾರಾಯಣ ಪ್ರಕಾಶ್‌ ನೆಲ್ಲಿತ್ತಿಮಾರು, ನಿವೃತ್ತ ಶಿಕ್ಷಕಿ ಪ್ರತಿಭಾ ಓಕುಣ್ಣಾಯ ಬೊಳ್ಳಿಂಬಳ,  ಕಾರ್ತಿಕೇಯ ರೆಡ್‌ ಸ್ಟೋನ್‌ ಗ್ರೂಪ್‌ನ ಹೇಮಚಂದ್ರ ಮುರ, ನಿವೃತ್ತ ಕೆಎಸ್‌ಆರ್‌ಟಿಸಿ ಅಧಿಕಾರಿ ತಮ್ಮಣ್ಣ ನಾಯ್ಕ ಸುಡುಕುಳಿ, ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಮಣಿಯಾಣಿ, ಪ್ರಗತಿಪರ ಕೃಷಿಕ ಕೃಷ್ಣಪ್ರಕಾಶ್‌ ಅರ್ಧಮೂಲೆ, ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ, ನಿವೃತ್ತ ಉಪ ಸಹಾಯಕ ಪೊಲೀಸ್‌ ನಿರೀಕ್ಷಕ ಚಂದ್ರಕಾಂತ್ ಡಿ., ಹೆಡ್‌ಕಾನ್‌ಸ್ಟೇಬಲ್‌ ರಾಧಾಕೃಷ್ಣ ಕುಲಾಲ್‌ ಉಡ್ಡಂಗಳ, ಪಾಣಾಜೆ ಗ್ರಾ.ಪಂ. ಸದಸ್ಯೆ ಸುಲೋಚನಾ, ಆರ್ಲಪದವು ಸ್ನೇಹ ಟೆಕ್ಸ್‌ಟೈಲ್ಸ್‌ನ ಮ್ಹಾಲಕ ವರದರಾಜ್‌ ನಾಯಕ್‌, ಪುತ್ತೂರು ಅರಣ್ಯಾಧಿಕಾರಿ ಕಿರಣ್‌ ಕುಮಾರ್‌, ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ, ಉದ್ಯಮಿ ಯಜ್ಞಪುರುಷ ಬಜಕೂಡ್ಲು ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here