ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸೆ.3ರಂದು ಭೇಟಿ ನೀಡಿದರು. ಸಂಘದ ಕಾರ್ಯ ಚಟುವಟಿಕೆಯನ್ನು ವೀಕ್ಷಿಸಿ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾರ್ವಕ ಹಾಲು ಉತ್ಪಾದಕರ ಸಹಕರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮದರ ಇಡ್ಯಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ನಿರ್ದೇಶಕರುಗಳಾದ ವಸಂತ ದಲಾರಿ, ವಾಸಪ್ಪ ಗೌಡ, ಗಣೇಶ್ ಎಂ, ರಾಮಚಂದ್ರ, ರಾಮಣ್ಣ ಪಿ, ಕಾಂತ ಪರವ, ರಾಜೀವಿ ಬೀರುಳಿಗೆ, ಸಂಘದ ಕಾರ್ಯದರ್ಶಿ ದಮಯಂತಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.