ಪುತ್ತೂರು:ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಿಆರ್‌ಸಿ ಕಾಲೋನಿಯ ನಿವಾಸಿ ಗೋವಿಂದನ್‌ರವರ ಪುತ್ರ ಕಲೈ ಅರಸು(49ವ.)ಆ.31ರಿಂದ ನಾಪತ್ತೆಯಾಗಿದ್ದಾರೆ.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು ಸುಮಾರು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಪುತ್ತೂರಿನ ಪ್ರಜ್ಞಾ ನರ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಇವರು ಪ್ರತಿದಿನ ಔಷಧಿ ಸೇರಿಸುತ್ತಿದ್ದರು.ಆ.31ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಮನೆಯಿಂದ ಹೊರಗಡೆ ಹೋಗಿದ್ದ ಅವರು 12.30ಕ್ಕೆ ಮನೆಗೆ ಹಿಂತಿರುಗಿ ಬಂದು ಸ್ಕೂಟರ್‌ನ್ನು ಮನೆಯ ಹಿಂಬದಿಯಲ್ಲಿಟ್ಟು ಅಲ್ಲಿಂದಲೇ ರಬ್ಬರ್ ತೋಟಕ್ಕೆ ಹೋದವರು ಮತ್ತೆ ಮನೆಗೆ ಬಾರದೇ ನಾಪತ್ತೆಯಾಗಿದ್ದರು.ಮನೆ ಸುತ್ತಮುತ್ತಲೂ ಹುಡುಕಾಡಿದರೂ ಅವರು ಪತ್ತೆಯಾಗಿಲ್ಲ ಎಂದು ಕಲೈ ಅರಸು ಅವರ ಪತ್ನಿ ಸುಮತಿಯವರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ನಾಪತ್ತೆಯಾಗಿರುವ ಕಲೈ ಅರಸುರವರು 5.6 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಹಣೆಯ ಭಾಗದಲ್ಲಿ ಗಾಯದ ಗುರುತು, ಎಡಕೆನ್ನೆಯ ಮೇಲೆ ದೊಡ್ಡ ಗಾತ್ರದ ಕೆಡು ಇರುತ್ತದೆ. ಮಾಸಲು ಕಾಪಿ ಬಣ್ಣದ ಅಂಗಿ, ನೀಲಿ ಬಣ್ಣದ ಲುಂಗಿ ಧರಿಸಿದ್ದಾರೆ.ತಮಿಳು, ತುಳು,ಕನ್ನಡ ಮಲಯಾಳಂ ಭಾಷೆಗಳಲ್ಲಿ ಮಾತು ಬಲ್ಲವರಾಗಿದ್ದಾರೆ.ಇವರ ಕುರಿತು ಯಾವುದೇ ಮಾಹಿತಿ ಲಭಿಸಿದರೆ ಪೊಲೀಸರಿಗೆ ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.