





ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.


ವಿದ್ಯಾರ್ಥಿನಿ ಸ್ಪೂರ್ತಿಯವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಜೂನಿಯರ್ ಶಿಕ್ಷಕರಾಗಿ ಎಲ್ಲರ ಮನಗೆದ್ದರು. ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಎಷ್ಟು ತಿಳ್ಕೊಂಡಿದ್ದಾರೆ ಎಂಬುದರ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಿದ್ಯಾರ್ಥಿಗಳಿಗೆ ಹಿತವಚನವ ನೀಡಿ ಆಶೀರ್ವದಿಸಿ ,ಶಿಕ್ಷಕರೆಲ್ಲರನ್ನು ಶಾಲು ಹೊದಿಸಿ ಸನ್ಮಾನಿಸಿದರು.






ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್, ಶಿಕ್ಷಕಿಯರಾದ ಶೇಖ್ ಅಸ್ಮಾ,ಚೇತನಾ,ಮಮತಾ ಆರ್, ಶೇಖ್ ಜಲಾಲುದ್ದೀನ್, ನೂರ್ ಜಹಾನ್, ಶೇಖ್ ಸಾದಿಯ,ಪವಿತ್ರ, ವನಿತಾ ಶೆಟ್ಟಿ , ಚಂದ್ರಾವತಿ,ಎಲ್ಸಿ ಲಸ್ರಾದೋ,ಖುರ್ಷಿದ್, ಅನ್ನಪೂರ್ಣೇಶ್ವರಿ,ರಝೀಯ ಎಸ್.ಪಿ , ಸಮೀನಾ,ತೃಪ್ತಿ, ರಿಫಾನ, ಕರಾಟೆ ಇನ್ಸ್ಟ್ರಕ್ಟರ್ ಮುಹಮ್ಮದ್ ನದೀಮ್ ಹಾಗೂ ನೀಲಮಕ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ವಿಶೇಷ ಉಡುಗೊರೆ ಕೊಟ್ಟು ಸಂಭ್ರಮಿಸಿದರು. ಎಲ್ಲ ಶಿಕ್ಷಕರನ್ನು ಫಾತಿಮತ್ ಆಫಿದಾ ವಂದಿಸಿ, ಕಿಶ್ಫಾ ಝಬೀನ್ ಸ್ವಾಗತಿಸಿದರು. ಫಾತಿಮತ್ ನೌಶಿಯ ಕಾರ್ಯಕ್ರಮ ನಿರೂಪಿಸಿದರು.


            







