ಉಪ್ಪಿನಂಗಡಿ: ಶ್ರೀ ಜೆರಾಕ್ಸ್ ಸೆಂಟರ್ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಹಲ್‌ನಲ್ಲಿ ಶ್ರೀ ಜೆರಾಕ್ಸ್ ಸೆಂಟರ್ ಸೆ.7ರಂದು ಶುಭಾರಂಭಗೊಂಡಿತು.


ಶ್ರೀ ಶಾರದಾಂಬಾ ಸೇವಾ ಸುಧಾರಣಾ ಸಂಘದ ಅಧ್ಯಕ್ಷ ಕೆ ರಾಜೇಶ್ ನಾಯಕ್ ನೆಕ್ಕಿಲಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಉಪ್ಪಿನಂಗಡಿ ಗ್ರಾ.ಪಂ.ಸದಸ್ಯ ಧನಂಜಯ ನಟ್ಟಿಬೈಲ್ ರಿಬ್ಬನ್ ಕತ್ತರಿಸಿ ಕಚೇರಿ ಉದ್ಘಾಟಿಸಿದರು. ಈ ಸಂದರ್ಭ ಇಳಂತಿಲ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ ಇಳಂತಿಲ, ಪ್ರಮುಖರಾದ ಈಶ್ವರ ನಾಯಕ್, ಶೇಖರ ನಾಯಕ್, ಸವಿತಾ ಸ್ವೀಟ್ಸ್ ಮಾಲಕ ಪೂವಪ್ಪ ಗೌಡ, ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ವಾಣಿ ರಾಜೇಶ್ ನಾಯಕ್, ಪಂಚಾಮೃತ ಫ್ಲವರ್ ಸ್ಟಾಲ್‌ನ ಚಿದಾನಂದ, ಲಕ್ಷ್ಮೀ ವೆಂಕಟೇಶ್ ಸಿಲ್ಕ್ ಹೌಸ್‌ನ ಮಾಲಕ ಚಂದ್ರಶೇಖರ, ಶ್ರೀ ದೇವಿ ಡ್ರೆಸ್ಸಸ್ಸ್‌ನ ಮಾಲಕ ಪರಮೇಶ್ವರ ನೆಕ್ಕರೆ ಹಾಗೂ ಬಂಧು- ಮಿತ್ರರು ಬಂದು ಶುಭ ಹಾರೈಸಿದರು. ಜೆರಾಕ್ಸ್ ಸೆಂಟರ್‌ನ ಮಾಲಕ ರಮೇಶ್ ಸುಭಾಷ್‌ನಗರ ಸ್ವಾಗತಿಸಿದರು.

LEAVE A REPLY

Please enter your comment!
Please enter your name here