ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಶ್ರೀ ದುರ್ಗಾಪೂಜೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.6 ಮತ್ತು ಸೆ.7ರಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ ಅವರ ನೇತೃತ್ವದಲ್ಲಿ ನಡೆಯಿತು.
ಸೆ.6ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ, ಸಂಜೆ ಶ್ರೀ ದುರ್ಗಾಪೂಜೆ, ಅನ್ನಸಂತರ್ಪಣೆ,ರಾತ್ರಿ ವಿ.ಜೆ.ವಿಖ್ಯಾತ್ ಸುಳ್ಯ ಸಾರಥ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಹಾಗೂ ದಂಪತಿಗಳಿಗೆ ವಿಶೇಷ ಮನೋರಂಜನಾ ಆಟಗಳು ಹಾಗೂ ಉಡುಗೊರೆಯೊಂದಿಗೆ ಕುಟುಂಬೋತ್ಸವ ನಡೆಯಿತು.
ಸೆ.7ರಂದು ಬೆಳಿಗ್ಗೆ ಗಣಪತಿ ವಿಗ್ರಹ ಪ್ರತಿಷ್ಟೆ,ಬಳಿಕ ಆಟೋಟ ಸ್ಪರ್ಧೆಗಳು ನಡೆಯಿತು. ಗಣಪತಿ ಹವನ,ಭಜನಾಮೃತ,ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.
ಸಂಜೆ ಸರ್ವೆಯ ಮುಖ್ಯರಸ್ತೆಯಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ಚೆಂಡೆ ವಾದನ. ಸ್ಯಾಕ್ಸೋಫೋನ್ ವಾದನ ಗೊಂಬೆ ಕುಣಿತ, ಕುಣಿತ ಭಜನೆ ಮರಾಟಿ ಯುವ ವೇದಿಕೆ ಭಜನಾ ತಂಡ ಕೊಂಬೆಟ್ಟು ಪುತ್ತೂರು, ಮಕ್ಕಳ ಕುಣಿತಾ ಭಜನಾ ತಂಡ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ ಸರ್ವೆ, ರಾಮ ಪರಂಟೋಲು ಮತ್ತು ಬಳಗದವರಿಂದ ಹುಲಿ ಕುಣಿತ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ಶೋಭಾಯಾತ್ರೆ ಹೊರಟು ಸರ್ವೆ ಗೌರಿ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.ಸರ್ವೆ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಭನವರೆಗೆ ಶೋಭಾಯಾತ್ರೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ಈ ಸಂದರ್ಭದಲ್ಲಿ ಶ್ರೀಗಣೇಶೋತ್ಸವ ಸಮಿತಿಯ ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ,ಅಧ್ಯಕ್ಷ ವಿನಯ ಕುಮಾರ್ ರೈ ಸರ್ವೆ ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೌಡ ತಂಬುತ್ತಡ್ಕ,ಗೌರವ ಸಂಚಾಲಕರಾದ ಆನಂದ ಪೂಜಾರಿ ಸರ್ವೆದೋಳಗುತ್ತು , ವಿಜಯಕುಮಾರ್ ರೈ ಸರ್ವೆ, ಬೆಂಗಳೂರು,ಕಾರ್ಯಧ್ಯಕ್ಷರಾದ ಆನಂದ ಭಂಡಾರಿ ಸೊರಕೆ, ಶ್ರೀ ಶಶಿಧರ ಎಸ್. ಡಿ. ಸರ್ವೆದೋಳಗುತ್ತು, ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿ ಸೊರಕೆ, ರಾಮಕೃಷ್ಣ ಎಸ್. ಡಿ. ಸರ್ವೆದೋಳಗುತ್ತು ,ಪುರಂದರ ರೈ ರೆಂಜಲಾಡಿ, ಸುರೇಶ್ ಎಸ್. ಡಿ. ಸರ್ವೆದೋಳಗುತ್ತು ,ಲಕ್ಷ್ಮೀಶ ರೈ ಸರ್ವೆ, ,ತಿಲಕ್ ರಾಜ್ ಕರುಂಬಾರು, ಅನೀಶ್ ಕಲ್ಲಮೆಟ್ಟು,ಕಾರ್ಯದರ್ಶಿಗಳಾದ ಗೌತಮ್ ರೈ ಸರ್ವೆ, ರಿತೇಶ್ ರೈ ಬಾವ,ಜೊತೆ ಕಾರ್ಯದರ್ಶಿಗಳಾದ ಅಶೋಕ್ ನಾಯ್ಕ ಸೊರಕೆ, ಕಿರಣ್ ಎಸ್. ಡಿ. ಸರ್ವೆದೋಳಗುತ್ತು,ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ರೈ ಸೊರಕೆ ಮೊದಲಾದವರಿದ್ದರು.
ಸಹಕರಿಸಿದ ಮಹಾಜನತೆಗೆ ಕೃತಜ್ಞತೆಗಳು
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆದ ದ್ವಿತೀಯ ವರ್ಷದ ಗಣೇಶೋತ್ಸವ ಯಶಸ್ವಿಯಾಗಿದೆ.ನಮ್ಮ ನಿರೀಕ್ಷೆಗೂ ಮೀರಿ ಭಕ್ತಾದಿಗಳು ಸಹಕರಿಸಿದ್ದಾರೆ,ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದಾರೆ.ವಿವಿಧ ಸಮಿತಿಗಳ ಸದಸ್ಯರು, ಸಂಚಾಲಕರು,ಪದಾಧಿಕಾರಿಗಳು ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.ಈ ಕಾರ್ಯದಲ್ಲಿ ಸಹಕರಿಸಿದ ಮಹಾಜನತೆಗೆ ಕೃತಜ್ಞತೆಗಳು.ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತಾದಿಗಳ ಸಹಕಾರ ಸ್ತುತ್ಯರ್ಹ.
-ಶಿವನಾಥ ರೈ ಮೇಗಿನಗುತ್ತು ,ಸಂಚಾಲಕರು ಶ್ರೀಗಣೇಶೋತ್ಸವ ಸಮಿತಿ ಸರ್ವೆ
ಹಿರಿಯರ ಮಾರ್ಗದರ್ಶನ ,ಯುವ ಪಡೆಯ ಉತ್ಸಾಹ
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ಅನುಗ್ರಹದಿಂದ ಪ್ರಥಮ ವರ್ಷದ ಗಣೇಶೋತ್ಸವವು ಯಶಸ್ವಿಯಾಗಿದೆ.ಶ್ರೀದೇವರ ಪೂರ್ಣಾನುಗ್ರಹ ಭಕ್ತರಿಗೆ ಇದೆ ಎಂಬುದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರೇ ಸಾಕ್ಷಿ. ಹಿರಿಯರ ಮಾರ್ಗದರ್ಶನ ,ಯುವಪಡೆಯ ಉತ್ಸಾಹದಿಂದ ಯಶಸ್ವಿಯಾಗಿದೆ.
-ವಿನಯ ಕುಮಾರ್ ರೈ ಸರ್ವೆ ,ಅಧ್ಯಕ್ಷರು ,ಶ್ರೀ ಗಣೇಶೋತ್ಸವ ಸಮಿತಿ ಸರ್ವೆ