ಕಡಿಮೆ ಬೆಲೆಗೆ ಫರ್ನಿಚರ್ ಖರೀದಿಸಲು ಸುವರ್ಣಾವಕಾಶ-ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ‘ಬಿಗ್ ಸೇಲ್’ ಮೆಗಾ ಆಫರ್

0

ಪುತ್ತೂರು: ಇಲ್ಲಿನ ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ‘ಬಿಗ್ ಸೇಲ್’ ಭರ್ಜರಿ ಆಫರ್ ಪ್ರಕಟಿಸಲಾಗಿದೆ. ಸೆ.1ರಂದು ಬಿಗ್ ಸೇಲ್ ಆಫರ್ ಪ್ರಾರಂಭಗೊಂಡಿದ್ದು ಸೆ.30ರ ವರೆಗೆ ಆಫರ್ ಇರಲಿದೆ.


ಫ್ಯಾಕ್ಟರಿ ಬೆಲೆಯಲ್ಲಿ ನೇರವಾಗಿ ಫರ್ನಿಚರ್ ಐಟಂಗಳನ್ನು ಮಾರಾಟ ಮಾಡುವ ಹೆಸರಾಂತ ಮಳಿಗೆಯಾಗಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಧುನಿಕ ಶೈಲಿಯ ಫರ್ನಿಚರ್‌ಗಳ ಬೃಹತ್ ಸಂಗ್ರಹ ಲಭ್ಯವಿದ್ದು ವಿವಿಧ ಫರ್ನಿಚರ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇಎಂಐ ಮೂಲಕ ಕನಿಷ್ಠ ದರ ಪಾವತಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದಾಗಿದೆ.

ಕೇರಳದ ಹೆಸರಾಂತ ಮಳಿಗೆ ಇದೀಗ ನಿಮ್ಮೂರಿನಲ್ಲಿ:
ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಕೇರಳದಲ್ಲಿ ಹೆಸರಾಂತ ಫರ್ನಿಚರ್ ಫ್ಯಾಕ್ಟರಿಯಾಗಿದ್ದು ಅಲ್ಲಿನ ಫ್ಯಾಕ್ಟರಿಯಲ್ಲಿ ತಯಾರಾದ ವಿವಿಧ ಮಾದರಿಯ ಗುಣಮಟ್ಟದ ಫರ್ನಿಚರ್ ಐಟಂಗಳನ್ನು ತಮ್ಮ ವಿವಿಧ ಮಳಿಗೆಗಳ ಮೂಲಕ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪುತ್ತೂರಿನ ದರ್ಬೆಯಲ್ಲಿರುವ ಮಳಿಗೆಯಲ್ಲೂ ಫ್ಯಾಕ್ಟರಿ ದರದಲ್ಲಿ ಫರ್ನಿಚರ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯು ಇದೀಗ ಹಬ್ಬಗಳ ಸಂಭ್ರಮವನ್ನು ಇಮ್ಮಡಿಗೊಳಿಸುವ ಸಲುವಾಗಿ ಬಿಗ್ ಸೇಲ್ ಎನ್ನುವ ಆಫರ್ ನೀಡಲಾಗಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಫರ್ನಿಚರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಭರ್ಜರಿ ಸೇಲ್:
‘ಬಿಗ್ ಸೇಲ್’ ಆಫರ್‌ಗೆ ಈಗಾಗಲೇ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನನಿತ್ಯ ಹಲವಾರು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಬಾನುವಾರವೂ ಮಳಿಗೆ ತೆರೆದಿರುತ್ತದೆ. ಗ್ರಾಹಕರು ಖರೀದಿಸುವ ವಸ್ತುಗಳನ್ನು ಉಚಿತವಾಗಿ ಹೋಂ ಡೆಲಿವರಿ ಮಾಡುವ ವ್ಯವಸ್ಥೆಯೂ ಇದೆ. ಆಫರ್ ಬಗ್ಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

ಕಡಿಮೆ ಬೆಲೆಗೆ ಏನೇನಿದೆ..?
2 ಡೋರ್ ವರ‍್ಡ್‌ರೋಬ್ ರೂ.5900, 3 ಡೋರ್ ವರ‍್ಡ್‌ರೋಬ್ ರೂ.8500, ಸ್ಟಡೀ ಟೇಬಲ್ ರೂ.3700, ಲಾರ್ಜರ್ ಸೋಫಾ ರೂ.13700, ದಿವಾನಾ ಕಾಟ್ ರೂ.5500, ಬೆಡ್‌ರೂಮ್ ಸೆಟ್ ರೂ.19500, 4 ಡೋರ್ ಬೆಡ್‌ರೂಮ್ ಸೆಟ್ ರೂ.26900, ವುಡನ್ ಸೋಫಾ ರೂ.21900, ವುಡನ್ ಕಾಟ್ ರೂ.10900, 6 ಸೀಟರ್ ಡೈನಿಂಗ್ ಸೆಟ್ ರೂ.17900, 8 ಸೀಟರ್ ಡೈನಿಂಗ್ ಸೆಟ್ ರೂ.26900, ಸಿಟೌಟ್ ಬೆಂಚ್ ರೂ.6500, ಕಿಚನ್ ಡೈನಿಂಗ್ ಸೆಟ್ ರೂ.12900, ಐರನಿಂಗ್ ಟೇಬಲ್ ರೂ.3900, 3 ಸೀಟರ್ ಸೋಫಾ ರೂ.7500 ಹಾಗೂ 14900, ಟೀ ಪಾಯಿಂಟ್ ರೂ.3500, 6 ಸೀಟರ್ ಟೈಲ್ ಟಾಪ್ ರೂ.24900 ಅಲ್ಲದೇ ಸ್ಪ್ರಿಂಗ್ ಬೆಡ್ ಒಂದು ಖರೀದಿಸಿದರೆ ಮತ್ತೊಂದು ಉಚಿತವಾಗಿ ನೀಡಲಾಗುತ್ತದೆ, ಅದೇ ರೀತಿ ಬೆಡ್‌ಶೀಟ್ ಒಂದು ಖರೀದಿಸಿದರೆ ಒಂದು ಉಚಿತವಾಗಿ ನೀಡಲಾಗುತ್ತದೆ. ಮಾತ್ರವಲ್ಲದೇ ಇನ್ನಿತರ ಅನೇಕ ಫರ್ನಿಚರ್ ಐಟಂಗಳು ಮಳಿಗೆಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8050058212, 7511182212 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here