ಸೆ.9ರಿಂದ15: ನೆಲ್ಯಾಡಿ ಜೇಸಿಐ ’ಜೇಸಿ ಸಪ್ತಾಹ’

0

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಜೇಸಿರೆಟ್ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ 41ನೇ ವರ್ಷದ ಜೇಸಿ ಸಪ್ತಾಹ ’ ಡೈಮಂಡ್-2024’ ಸೆ.9ರಿಂದ 15ರ ತನಕ ನಡೆಯಲಿದೆ ಎಂದು ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ ಬಂಟ್ರಿಯಾಲ್, ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್ ಹಾಗೂ ಪುರಂದರ ಗೌಡ ಡೆಂಜ ಅವರು ತಿಳಿಸಿದ್ದಾರೆ.


ಸೆ.9ರಂದು ಸಂಜೆ 5 ಗಂಟೆಗೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದಲ್ಲಿ ಸ್ಥಾಪಕ ಜೇಸಿ ಸದಸ್ಯರ ಗುರುತಿಸುವಿಕೆ ನಡೆಯಲಿದೆ. ಬಳಿಕ ಕೊಪ್ಪ ಪ್ರಶಾಂತ ನಿವಾಸಿ ಆಶ್ರಮ ಭೇಟಿ ಕಾರ್ಯಕ್ರಮ ನಡೆಯಲಿದ್ದು ಆಶ್ರಮ ವಾಸಿಗಳಿಗೆ ಯೋಗ ಪ್ರಾತ್ಯಕ್ಷಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಣ್ಣು ಹಂಪಲು ವಿತರಣೆ ನಡೆಯಲಿದೆ. ಸೆ.10ರಂದು ಮಧ್ಯಾಹ್ನ 2.30ಕ್ಕೆ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಡ್ರಗ್ಸ್ ನಿಯಂತ್ರಣದ ಬಗ್ಗೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸೆ.11ರಂದು ಸಂಜೆ 4.30ರಿಂದ ಕೌಕ್ರಾಡಿ ಬರೆಗುಡ್ಡೆ ವಾತ್ಸಲ್ಯ ಮನೆಯಲ್ಲಿ ನೀರು ಇಂಗಿಸುವಿಕೆ, ಮಳೆಕೊಯ್ಲು, ಪರಿಸರ ಸಂರಕ್ಷಣೆ ಕಾರ್ಯಕ್ರಮ ನಡೆಯಲಿದೆ. ಸೆ.12ರಂದು ಬೆಳಿಗ್ಗೆ 11.30ಕ್ಕೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ, ಯುವಕರ ಮುಂದಿನ ಸವಾಲುಗಳು, ವ್ಯಕ್ತಿ ಮಾರ್ಗದರ್ಶನ ನಡೆಯಲಿದೆ. ಸೆ.13ರಂದು ಸಂಜೆ 5.30ಕ್ಕೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವ ವಾಣಿಜ್ಯೋದ್ಯಮಿ ಗುರುತಿಸುವುದು, ವಲಯಾಧ್ಯಕ್ಷರ ಭೇಟಿ, ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆ, ನೆಲ್ಯಾಡಿ ಪಿಎಂಶ್ರೀ ಶಾಲೆ ಹಾಗೂ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗೆ ಶಾಶ್ವತ ಯೋಜನೆಗಳ ಕೊಡುಗೆ ನಡೆಯಲಿದೆ. ಸೆ.14ರಂದು ಮಧ್ಯಾಹ್ನ 2ರಿಂದ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಹಿಳಾ ದಿನಾಚರಣೆ ನಡೆಯಲಿದ್ದು ಹಿರಿಯ ಮಹಿಳಾ ಸಾಧಕಿಯರ ಗುರುತಿಸುವಿಕೆ ನಡೆಯಲಿದೆ.


ಸೆ.15-ಸಮಾರೋಪ:
ಸೆ.15ರಂದು ಸಂಜೆ 4.30ರಿಂದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜೇಸಿ ಕುಟುಂಬ ಸಂಭ್ರಮ ನಡೆಯಲಿದ್ದು ಜೇಸಿ ಕುಟುಂಬದ ಸದಸ್ಯರಿಗೆ ವಿವಿಧ ಸ್ಪರ್ಧೆ ನಡೆಯಲಿದೆ. ಬಳಿಕ ಸಪ್ತಾಹದ ಸಮಾರೋಪ ನಡೆಯಲಿದ್ದು ಕಮಲಪತ್ರ ಪ್ರಶಸ್ತಿ ಪ್ರದಾನ, ಸೇವೆಯಿಂದ ನಿವೃತ್ತಿ ಹೊಂದಿದ ಸಾಧಕರಿಗೆ ಸನ್ಮಾನ, ವರ್ಗಾವಣೆಗೊಂಡ ಮುಖ್ಯಗುರುಗಳಿಗೆ ಅಭಿನಂದನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here