ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ, ಕದಿರು ವಿನಿಯೋಗ, ತೆನೆ ವಿತರಣೆ-ಇಂದು ಶುದ್ದ ಷಷ್ಠಿ ಪೂಜೆ ,ಅನ್ನ ಸಂತರ್ಪಣೆ

0

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಸೆ.7ರಂದು ನಡೆಯಿತು.

ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ದೇವಸ್ಥಾನದಲ್ಲಿ ಗಣಪತಿ ಹವನ ,ದೇವಸ್ಥಾನಕ್ಕೆ ತೆನೆ ತುಂಬಿಸುವುದು, ಭಕ್ತಾದಿಗಳಿಗೆ ತೆನೆ ವಿತರಣೆ ನಡೆಯಿತು. ವಲ್ಮಿಕ ರೂಪಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಹಾಗೂ ಮೊಕ್ತೇಸರರು, ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ಶುದ್ದ ಷಷ್ಠಿ ಪೂಜೆ
ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.9ರಂದು  ಶುದ್ಧ ಷಷ್ಠಿ ಪೂಜೆ ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಪ್ರತೀ ತಿಂಗಳ ಸಂಕಷ್ಟಿಯಂದು ಮಹಾಗಣಪತಿ ಹೋಮ ನಡೆಯಲಿದೆ.

ಅಲ್ಲದೇ ಭಕ್ತಾದಿಗಳು ಇಚ್ಚಿಸಿದ ದಿನಗಳಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ,ಶ್ರೀ ಸತ್ಯನಾರಾಯಣ ಪೂಜೆ,ಆಶ್ಲೇಷ ಬಲಿ ,ಶ್ರೀ ಶನೈಶ್ಚರ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ.ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ  ನಳೀಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here