ಆಲಂಕಾರು: ಆಟೋರಿಕ್ಷಾ-ಬುಲೆಟ್ ಡಿಕ್ಕಿ : ಸ್ಥಳದಲ್ಲಿ ಜಮಾಯಿಸಿದ ಗುಂಪು

0

ಆಲಂಕಾರು: ಆಲಂಕಾರು ಪೇಟೆಯಲ್ಲಿ ಆಟೋರಿಕ್ಷಾ ಮತ್ತು ಬುಲೆಟ್ ಡಿಕ್ಕಿಯಾಗಿ ಬುಲೆಟ್ ಸವಾರ ಗಾಯಗೊಂಡ ಮತ್ತು ಆಟೋರಿಕ್ಷಾದ ಮುಂಭಾಗ ಹಾಗು ಬುಲೆಟ್‌ಗೆ ಹಾನಿಯಾದ ಘಟನೆ ನಡೆದಿದೆ. ಬುಲೆಟ್ ನ ಹೊಡೆತದಿಂದ ಪಕ್ಕದಲ್ಲಿ ನಿಲ್ಲಿಸಿದ್ದ ಆಪೆ ರಿಕ್ಷಾದ ಟಯರ್ ಪಂಕ್ಚರ್ ಆದ ಘಟನೆಯೂ ನಡೆದಿದೆ.

ಕುಂತೂರು ಚಾಮೆತ್ತಡ್ಕದ ನಿವಾಸಿಯ ಬುಲೆಟ್ ಮತ್ತು ಆಟೋ ರಿಕ್ಷಾ ಉಪ್ಪಿನಂಗಡಿ ಕಡೆಯಿಂದ ಆಲಂಕಾರಿಗೆ ಬರುತ್ತಿತ್ತು. ಆಟೋ ರಿಕ್ಷಾವನ್ನು ಗ್ರಾ.ಪಂ ಕಡೆಗೆ ತಿರುಗಿಸುವ ಸಂದರ್ಭದಲ್ಲಿ ಅಪಘಾತ ನಡೆದಿದೆ. ನಂತರ ಗುಂಪು ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡರಾದರೂ, ಸೇರಿದವರ ಸಮ್ಮುಖದಲ್ಲಿ ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಯಿತು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here