ಪುತ್ತೂರು: ಬಿಜಾಪುರದಿಂದ ಕಬಕ ಪುತ್ತೂರು ರೈಲು ನಿಲ್ದಾಣವಾಗಿ ಮಂಗಳೂರಿಗೆ ತಲುಪಿದ ರೈಲಿನಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ವಾರಸುದಾರರಿದ್ದಲ್ಲಿ ರೈಲ್ವೇ ಪೊಲೀಸ್ನ್ನು ಸಂಪರ್ಕಿಸುವಂತೆ ರೈಲ್ವೇ ಪೊಲೀಸರು ಮನವಿ ಮಾಡಿದ್ದಾರೆ.
ಬಿಜಾಪುರದಿಂದ ಮಂಗಳೂರಿಗೆ ಸೆ.9ರ ಬೆಳಿಗ್ಗೆ ಗಂಟೆ 11ಕ್ಕೆ ತಲುಪಿದ ರೈಲಿನಲ್ಲಿ ಅಪರಿಚಿತ ಶವ ಇರುವುದು ಬೆಳಕಿಗೆ ಬಂದಿದೆ. ಸುಮಾರು 60ರಿಂದ 65 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಮೃತರ ಕೈಯಲ್ಲಿ ‘ತಾಯಿಯೇ ದೇವರು’ ಎಂದು ಅಚ್ಚು ಹಾಕಿಸಿದ್ದು, ಕಿಸೆಯಲ್ಲಿ ಬಂಟ್ವಾಳ ಆಸ್ಪತ್ರೆಯ ವಿಳಾಸವಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಅಥವಾ ಬಂಟ್ವಾಳ ಮೂಲದವರೆಂಬ ಸಂಶಯವಿದ್ದು ಮೃತರ ವಾರಸುದಾರರಿದ್ದಲ್ಲಿ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.