ರಾಮಕುಂಜ: 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ, ಗಣೇಶನಗರ ಕೊಯಿಲ- ರಾಮಕುಂಜ ಇದರ ವತಿಯಿಂದ 44ನೇ ವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವ ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ| ಆರ‍್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ಸೆ.7 ಮತ್ತು 8ರಂದು ನಡೆಯಿತು.


ಸೆ.7ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಉಷ:ಕಾಲ ಪೂಜೆ, ಶ್ರೀ ಮಹಾಗಣಪತಿಹೋಮ ನಡೆಯಿತು. ನಂತರ ಶಾರದಾನಗರ ಶ್ರೀ ಶಾರದಾಂಬಾ ಭಜನಾ ಮಂಡಳಿ, ಗೋಕುಲನಗರ ಶ್ರೀ ರಾಧಾಕೃಷ್ಣ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಅಪರಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ನಡೆಯಿತು.


ಧಾರ್ಮಿಕ ಸಭೆ:
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ದೈವನರ್ತಕರು, ಸಿವಿಲ್ ಇಂಜಿನಿಯರ್ ಆಗಿರುವ ಡಾ| ರವೀಶ್ ಪಡುಮಲೆ ಅವರು, ಜಾತಿ ಸಂಘಟನೆ ಹೆಸರಲ್ಲಿ ಹಿಂದೂಗಳನ್ನು ವಿಭಜನೆ ಮಾಡಲಾಗುತ್ತಿದೆ. ಇದರಿಂದಾಗಿ ಹಿಂದತ್ವದ ಪ್ರತಿಪಾದನೆಗೆ ಕೀಳರಿಮೆ ಉಂಟಾಗುತ್ತಿದೆ. ಜಾತಿ ಕೇಳಿದರೆ ನಾನು ಹಿಂದೂ ಎನ್ನಬೇಕು, ಹಾಗಾದಾಗ ಹಿಂದೂ ಸಮಾಜ ಎದ್ದು ನಿಂತು ಸಂಘಟನಾತ್ಮಕವಾಗಿ ಇರಲು ಸಾಧ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಎಂ.ಸತೀಶ್ ಭಟ್ ಅವರು ಮಾತನಾಡಿ ದೇವರ ಮೇಲೆ ಶ್ರದ್ಧೆ, ನಿಷ್ಕಲ್ಮಶ ಭಕ್ತಿ ಇರಬೇಕು ಎಂದರು. ಪ್ರಗತಿಪರ ಕೃಷಿಕ ರಾಮ ನಾಯ್ಕ ಏಣಿತಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಇಒ ಪದ್ಮಪ್ಪ ಗೌಡ, ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿರುವ ಯುಕ್ತ ವಿ.ಜಿ ಅವರನ್ನು ಈ ಸಂದರ್ಭರ್ದದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಮಹಾಣಪತಿ ಸೇವಾ ಸಮಿತಿಯ ಅಧ್ಯಕ್ಷ ಶರತ್ ಕೆದಿಲ ಸ್ವಾಗತಿಸಿದರು. ಗೌರವ ಸಲಹೆಗಾರ ಸದಾಶಿವ ಶೆಟ್ಟಿ ಮಾರಂಗ ವಂದಿಸಿದರು. ಲಕ್ಷ್ಮೀನಾರಾಯಣ ರಾವ್ ಆತೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ’ಒರಿಯಾಂಡಲಾ ಸರಿಬೋಡು..! ತುಳು ನಾಟಕ ಪ್ರದರ್ಶನಗೊಂಡಿತು.


ಶೋಭಾಯಾತ್ರೆ:
ಸೆ.9ರಂದು ಪೂರ್ವಾಹ್ನ ಶ್ರೀ ಮಹಾಗಣಪತಿ ದೇವರ ಉಷ:ಕಾಲ ಪೂಜೆ, ಶ್ರೀ ಮಹಾಗಣಪತಿ ಹೋಮ ನಡೆಯಿತು. ನಂತರ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುರುಷರ ಕಬಡ್ಡಿ ಪಂದ್ಯಾಟ, ವಿವಿಧ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆದು ಶ್ರೀ ದೇವರ ಶೋಭಾಯಾತ್ರೆಯು ಗಣೇಶನಗರ, ಶಾರದಾನಗರ, ಗೋಕುಲನಗರ ಮಾರ್ಗವಾಗಿ ಸಾಗಿ ಕೆಮ್ಮಾರದಲ್ಲಿ ಕಟ್ಟೆಪೂಜೆ ನಡೆದು ಶ್ರೀ ಮಹಾಗಣಪತಿ ದೇವರ ಜಲಸ್ಥಂಭನ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಕೀಲುಕುದುರೆ, ಗೊಂಬೆಕುಣಿತ, ಚಾರ್ವಾಕ ಶ್ರೀ ಕಪಿಲೇಶ್ವರ ಕಲಾ ಸಮಿತಿಯವರಿಂದ ಚೆಂಡೆ ಪ್ರದರ್ಶನ, ತಾಲೀಮು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here