ತ್ಯಾಗರಾಜನಗರ: ಹಿಂದೂ ಜಾಗರಣ ವೇದಿಕೆಯ 22 ನೇ ವಾರ್ಷಿಕ ಸಮಾರಂಭ, ಧಾರ್ಮಿಕ ಸಭೆ

0

ಹಿಂದೂ ಎನ್ನುವುದು ಜಾತಿಯಲ್ಲಿ ವಿಲೀನವಾಗಬಾರದು : ರವೀಶ್ ಪಡುಮಲೆ

ಪುತ್ತೂರು: ಜಾತಿ ಸಂಘಟನೆಗಳು ಬೇಕು ಆದರೆ ಆಚರಣೆಗಳು ಜಾತಿಗೆ ಸೀಮಿತವಾಗಬಾರದು. ಇಂದಿನ ದಿನಗಳಲ್ಲಿ ಆಟಿದ ಕೂಟ, ಕೆಸರುಡೊಂಜಿ ದಿನ ಇತ್ಯಾದಿ ಆಚರಣೆಗಳನ್ನು ಕೆಲವೊಂದು ಜಾತಿ ಸಂಘಟನೆಗಳು ತಮ್ಮ ಜಾತಿಯವರಿಗೆ ಮಾತ್ರ ಸೀಮಿತವಾಗುವಂತೆ ಆಚರಣೆ ಮಾಡುತ್ತಿರುವುದು ಸರಿಯಲ್ಲ ಪ್ರತಿಯೊಬ್ಬರು ಒಗ್ಗಟ್ಟಾಗಿ ಆಚರಣೆಗಳನ್ನು ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಹಿಂದೂ ಎನ್ನುವುದು ಎಂದಿಗೂ ಜಾತಿಯಲ್ಲಿ ವಿಲೀನವಾಗಬಾರದು ಎಂದು ಉಪನ್ಯಾಸಕರಾದ ಡಾ.ರವೀಶ್ ಪಡುಮಲೆಯವರು ಅಭಿಪ್ರಾಯಪಟ್ಟರು.


ಅವರು ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ಇದರ 22 ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸೆ.9 ರಂದು ತ್ಯಾಗರಾಜನಗರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಜಾತಿ ಬೇಕು ಆದರೆ ಸಾಮಾಜಿಕವಾಗಿ ಬೆರೆಯುವಾಗ ನಾವು ಜಾತಿಯನ್ನು ಪರಿಗಣಿಸಬಾರದು ನಾವೆಲ್ಲರೂ ಹಿಂದೂ ಎನ್ನುವ ಭಾವನೆ ನಮ್ಮಲ್ಲಿ ಬರಬೇಕಾಗಿದೆ ಎಂದ ಅವರು, ಎಲ್ಲರನ್ನು ಒಂದೇ ಭಾವನೆಯಿಂದ ಗೌರವಿಸುವ ಮೂಲಕ ತ್ಯಾಗರಾಜನಗರದವರು ಮಾಡುತ್ತಿರುವ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಸನ್ಮಾನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ದೀಕ್ಷಾ ತ್ಯಾಗರಾಜನಗರ, ಪತ್ರಿಕೋದ್ಯಮದಲ್ಲಿ ರ‍್ಯಾಂಕ್ ಪಡೆದ ದಿವ್ಯಾ ವಿ.ರೈ ಹಾಗೇ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸುಷ್ಮಾ ಕೆ ಕೊಂಬರಡ್ಕ ಮತ್ತಿ ಶಿಶಿಕ್ ಬಾರಿಕೆರವರುಗಳನ್ನು ಜಾಗರಣ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ವಾರ್ಷಿಕ ಸಮಾರಂಭದ ಪ್ರಯುಕ್ತ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಅನ್ನದಾನ ಸೇವಾರ್ಥಿ ಅಜಿತ್ ರೈ ದೇರ್ಲ, ಹಿಂದೂ ಜಾಗರಣ ವೇದಿಕೆಯ ಸಂಯೋಜಕರಾದ ಭವಿತ್ ಪಯಂದೂರು ಉಪಸ್ಥಿತರಿದ್ದರು. ಹರೀಶ್ ಸ್ವಾಮಿನಗರ ಪ್ರಾರ್ಥಿಸಿದರು. ದಿವ್ಯಾ ರೈ ಸ್ವಾಗತಿಸಿದರು. ಆನಂದ ಸ್ವಾಮಿನಗರ, ಕೇಶವ ಸ್ವಾಮಿನಗರ, ಹಿಂದೂ ಜಾಗರಣ ವೇದಿಕೆಯ ಸಹ ಸಂಯೋಜಕ ಲೋಕೇಶ್ ಸ್ವಾಮಿನಗರ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು.ಅಶೋಕ್ ತ್ಯಾಗರಾಜನಗರ ವಂದಿಸಿದರು. ಸೌಮ್ಯ ವಿನಯಕುಮಾರ್ ಮತ್ತು ದಿವ್ಯಾ ರೈ ಕಾರ್ಯಕ್ರಮ ನಿರೂಪಿಸಿದರು. ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ಇದರ ಪದಾಧಿಕಾರಿಗಳು ಸಹಕರಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಶ್ರೀ ಅಯ್ಯಪ್ಪ ಭಜನಾ ಮಂದಿರದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ವಿಗ್ರಹದ ಶೋಭಾಯಾತ್ರೆಯನ್ನು ಬರಮಾಡಿಕೊಂಡು ಶ್ರೀ ಗಣೇಶ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಿರಣ್ ಸ್ವಾಮಿನಗರ ಮತ್ತು ಯತಿನ್ ಮಜ್ಜಾರಡ್ಕರವರ ಪ್ರಾಯೋಜಕತ್ವದಲ್ಲಿ ಕುಣಿತ ಭಜನಾ ತಂಡದ ಭಜನಾರ್ಥಿಗಳಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಯಿತು.

ಸಾಮೂಹಿಕ ಗಣಪತಿ ಹವನ
ಹಿಂದೂ ಜಾಗಣರ ವೇದಿಕೆಯ 22 ನೇ ವಾರ್ಷಿಕದ ಪ್ರಯುಕ್ತ ಸೆ.7 ರಂದು ಸಾಮೂಹಿಕ ಶ್ರೀ ಗಣಪತಿ ಹವನ ನಡೆಯಿತು. ಬೆಳಿಗ್ಗೆ ಗಣಪತಿ ಹವನ ಆರಂಭವಾಗಿ ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಅಪರಾಹ್ನ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here