ಕಾವು:ತುಡರ್ ಯುವಕ ಮಂಡಲದಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇವರ ವತಿಯಿಂದ ಅರಿಯಡ್ಕ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರವು ಸೆ.15ರಂದು ನನ್ಯ ಜನಮಂಗಳ ಸಭಾಭವನದಲ್ಲಿ ನಡೆಯಿತು.

ಸಮಾಜಮುಖಿ ಕಾರ್ಯದಲ್ಲಿ ತುಡರ್ ಯುವಕ ಮಂಡಲ ಮುಂಚೂಣಿಯಲ್ಲಿ:
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾವು ಲಯನ್ಸ್ ಕ್ಲಬ್ ನ ಅಧ್ಯಕ್ಷ ಜಗನ್ನಾಥ ರೈ ಗುತ್ತುರವರು ಮಾತನಾಡಿ ಸಮಾಜಮುಖಿ ಕೆಲಸವನ್ನು ಬಹಳ ಮುತುವರ್ಜಿಯಿಂದ ಮಾಡುವ ತುಡರ್ ಯುವಕ ಮಂಡಲವು ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಯುವಕ ಮಂಡಲದ ಎಲ್ಲಾ ಕೆಲಸಗಳು ಸಮಾಜದಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದು, ಜನರಿಗೆ ತುಂಬಾ ಉಪಯೋಗವಾಗಿದೆ ಎಂದು ಹೇಳಿದರು.


ಹೆಸರಿಗೆ ಅನ್ವರ್ಥವಾದ ಕಾರ್ಯಕ್ರಮ-ರಾಮಣ್ಣ ಡಿ
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ ರಾಮಣ್ಣ ಡಿ. ಆಚಾರಿಮೂಲೆಯವರು ಮಾತನಾಡಿ ತುಡರ್ ಅಂದರೆ ಬೆಳಕು, ಬೆಳಕನ್ನು ನೋಡಬೇಕಾದರೆ ದೃಷ್ಟಿ ಅಗತ್ಯ, ಹಾಗಾಗಿ ಕಣ್ಣಿನ ದೃಷ್ಟಿಯನ್ನು ತಪಾಸಣೆ ಮಾಡಿ ಚಿಕಿತ್ಸೆ ಕೊಡಿಸುವ ಕಾರ್ಯವು ತುಡರ್ ನ ಹೆಸರಿಗೆ ಅನ್ವರ್ಥವಾದ ಕಾರ್ಯಕ್ರಮವಾಗಿದೆ. ನಾವು ಸ್ವಾರ್ಥಿಗಳಾಗದೇ ಕಿಂಚಿತ್ತನ್ನು ಸಮಾಜಕ್ಕೆ ಅರ್ಪಿಸಿ ಸಮಾಜ ಸೇವೆಯಲ್ಲಿ ತೊಡಗಬೇಕು. ಆ ನಿಟ್ಟಿನಲ್ಲಿ ತುಡರ್ ಯುವಕ ಎಲ್ಲಾ ವಲಯದಲ್ಲೂ ಸಮಾಜ ಕಾರ್ಯವನ್ನು ಮಾಡಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಕ್ಕಳ ಕಣ್ಣಿನ ಬಗ್ಗೆ ಜಾಗೃತೆ ವಹಿಸಿ:ಡಾ.ರಾಮಚಂದ್ರ
ಶಿಬಿರದ ಮಹತ್ವವನ್ನು ತಿಳಿಸಿದ ನ್ಯೂ ವಿಷನ್ ಕಾರ್ಯಕ್ರಮದ ಮ್ಯಾನೇಜರ್ ಡಾ.ರಾಮಚಂದ್ರರವರು ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ನ ಅತಿಯಾದ ಬಳಕೆಯಿಂದ ಕಣ್ಣಿನ ದೃಷ್ಟಿಯಲ್ಲಿ ತೊಂದರೆಯನ್ನು ಕಾಣುತ್ತಿದ್ದು, ಈ ಬಗ್ಗೆ ಜಾಗೃತಿ ಅವಶ್ಯ, ಪ್ರಮುಖವಾಗಿ ಶಿಬಿರದ ಮೂಲಕ ಮಕ್ಕಳ ಕಣ್ಣಿನ ತಪಾಸಣೆ ನಡೆಸುವುದಲ್ಲದೇ, ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ, ಇಂತಹ ಕಾರ್ಯಕ್ರಮವನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಲು ಸಹಕಾರ ಮಾಡಿರುವ ತುಡರ್ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.


ಶಿಬಿರದ ಪ್ರಯೋಜನ ಪಡೆದುಕೊಳ್ಳಿ-ಪುರುಷೋತ್ತಮ ಆಚಾರ್ಯ
ಸಭಾಧ್ಯಕ್ಷತೆ ವಹಿಸಿದ್ದ ತುಡರ್ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಅಚಾರ್ಯ ನನ್ಯರವರು ಮಾತನಾಡಿ ನಮ್ಮ ಯುವಕ ಮಂಡಲವು ಕಳೆದ 14 ವರ್ಷದಲ್ಲಿ ಸಾಮಾಜಿಕ ಕಾರ್ಯದ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಶಿಬಿರಗಳನ್ನು ನಡೆಸಿದ್ದೇವೆ, ಈ ವರ್ಷವೂ ಗ್ರಾಮೀಣ ಭಾಗದ ಜನರಿಗೆ ಮುಖ್ಯವಾಗಿ ಉಪಯೋಗವಾಗುವ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ, ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ತುಡರ್ ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಪ್ರಾರ್ಥಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ಯತೀಶ್ ರೈ ಸ್ವಾಗತಿಸಿ ಮಾಜಿ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಗೌಪದಾಧಿಕಾರಿಗಳಾದ ಹರ್ಷಿತ್ ಎ.ಆರ್, ಲಿಂಗಪ್ಪ ನಾಯ್ಕ ನನ್ಯ, ಸದಸ್ಯರಾದ ಜಗನ್ನಾಥ ಗೌಡ ಪರನೀರು, ಭವಿತ್ ರೈ, ನಿರಂಜನ ರಾವ್, ರತೀಶ್ ಕೌಡಿಚ್ಚಾರ್, ರಮೇಶ್ ಗೌಡ ಆಚಾರಿಮೂಲೆ, ರಾಜೇಶ್ ಬಿ, ಬಾಲಕೃಷ್ಣ ಪಾಟಾಳಿ ನನ್ಯರವರು ಸಹಕರಿಸಿದರು.


115 ಜನ ಫಲಾನುಭವಿಗಳು:
ಬೆಳಿಗ್ಗೆ ಗಂಟೆ 10ರಿಂದ ಅಪರಾಹ್ನ ಗಂಟೆ 3ರವರೆಗೆ ನಡೆದ ಕಂಪ್ಯೂಟರೀಕೃತ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಒಟ್ಟು 115 ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಡಾ.ರಾಮಚಂದ್ರ, ಅಭಿಲಾಷ್, ರಕ್ಷತಾ, ಪ್ರಜ್ಞಾರವರು ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

85 ಜನರಿಗೆ ಉಚಿತ ಕನ್ನಡಕ ವಿತರಣೆ
ಶಿಬಿರದಲ್ಲಿ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ ನಡೆಸಿ ಸಮೀಪ ದೃಷ್ಟಿ ತೊಂದರೆ ಇರುವ ಒಟ್ಟು 85 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.

LEAVE A REPLY

Please enter your comment!
Please enter your name here