ಕಾವು: ಮಾಡ್ನೂರು ಗ್ರಾಮದ ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಸೆ.17ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ನವ್ಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಾಲ ವಿಕಾಸ ಸಮನ್ವಯ ಸಮಿತಿ ಅಧ್ಯಕ್ಷರು ವಸಂತಿ,ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಪಟ್ಟುಮೂಲೆ, ಆಶಾ ಕಾರ್ಯಕರ್ತೆ ಉಷಾ ಡಿ.ಎಂ ಉಪಸ್ಥಿತರಿದ್ದರು. ಬಾಲವಿಕಾಸ ಸಮನ್ವಯ ಸಮಿತಿಯ ಸದಸ್ಯರಾದ ಬೇಬಿ ಬಜಕುಡೆಲು, ಆಶಾ, ರೂಪ ಮಂಜಲ್ತಡ್ಕ, ಪದ್ಮಾವತಿ, ಪ್ರತಿಮಾ ನಿಧಿಮುಂಡ, ಉಷಾ ನನ್ಯ, ವಿನಿತಾ ವೇಣು ಮಧ್ಲ, ಅನಿತಾ ಆಚಾರಿಮೂಲೆ,ಜಯಂತಿ ಪಟ್ಟುಮೂಲೆ,ವೇದಾವತಿ ಮಧ್ಲ, ಲಲಿತಾ ಮದ್ಲ,ವಸಂತಿ ಮಿನೊಜಿಕಲ್, ರಮ್ಯ, ಶಾರದಾ, ಪೌಷ್ಟಿಕ ಆಹಾರ ತಯಾರಿಸಿದ್ದರು. ಇವರುಗಳಿಗೆ ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುಬ್ರಾಯ ಬಲ್ಯಾಯ ಬಹುಮಾನ ನೀಡಿದರು. ಪುಟಾಣಿಗಳಾದ ಐರಾ, ಮೋನಿಶ್, ಪರೀಕ್ಷಿತ್, ಚಿತೇಶ್, ಜಾನ್ವಿ,ಪಲ್ಲವಿ ಪ್ರಾರ್ಥಿಸಿದರು,ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ ಸ್ವಾಗತಿಸಿ, ಸಹಾಯಕಿ ಶಾರದ ಸಹಕರಿಸಿದರು.