ಶ್ರೀ ಶಾರದಾಂಬ ವಿವಿಧೋದ್ದೇಶ ಸೇವಾ ಸಹಕಾರ ಸಂಘದ ಮಹಾಸಭೆ

0

ಪುತ್ತೂರು: ಶ್ರೀ ಶಾರದಾಂಬ ವಿವಿಧೋದ್ದೇಶ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 20,89,15.355 ವ್ಯವಹಾರ ನಡೆಸಿ 5,81,841 ರೂಪಾಯಿ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ 15 ಶೇಕಡ ಡಿವಿಡೆಂಡ್ ವಿತರಿಸಲಾಗುವುದು ಸಾಲ ವಸೂಲಾತಿಯಲ್ಲಿಯೂ ಸಂಘ ಉತ್ತಮ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ವಿಜಯಕುಮಾರ್ ಕೈಪಂಗಳ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸೆಪ್ಟೆಂಬರ್ 22ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಚುಂಚಶ್ರೀ ಹವಾ ನಿಯಂತ್ರಿತ ಸಭಾಭವನದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 27,16,000 ಪಾಲು ಬಂಡವಾಳ ರೂಪಾಯಿ 2,99,99.604 ಠೇವಣಿ ಇರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ʼಬಿʼ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ ಎಂದರು.

ಪ್ರತಿಯೊಬ್ಬರು ಸಂಘದ ಶೇರುಗಳನ್ನು ಖರೀದಿಸಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ವಿನಂತಿಸಿದ ಅಧ್ಯಕ್ಷ ವಿಜಯಕುಮಾರ್, ಸಂಘದ ಅಭಿವೃದ್ಧಿಗೆ ಎಲ್ಲಾ ಸೇರುದಾರರ ಸಹಕಾರ ಅಗತ್ಯ .ಸಂಘದ ಶ್ರೀನಿಧಿ ಏಜೆಂಟರು ದಾಖಲೆ ಪ್ರಮಾಣದ ಶ್ರೀನಿಧಿ ಠೇವಣಿಯನ್ನು ಸಂಗ್ರಹಿಸಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಪ್ರಶಂಸೆ ವ್ಯಕ್ತಪಡಿಸಿದರು.

ನಿರ್ದೇಶಕ ರವೀಂದ್ರನಾಥ ನಾಯಕ್ ಪಾಟೀಲ್ , ಬಾಲಕೃಷ್ಣ ,ಕೆ ಎಸ್ ಆರ್ ಟಿ ಸಿ ಮಂಗಳೂರು ಸಂಘದ ಉಪಾಧ್ಯಕ್ಷ ಶಿವಣ್ಣ ಆನೆಕಲ್‌, ತ್ಯಾಂಪ ನಾಯಕ್ ಕಜೆ, ಮೋಹನ್ ಬೆದ್ರಾಳ, ಕೇಶವ ನಾಯ್ಕ್‌ ಮುಂಡಕೊಚ್ಚಿ,ದಿನೇಶ್ ಕುಡ್ತಮುಗೇರು, ಶಾರದಾ ಕೇಶವ ಸಾಲ್ಮರ, ಕೇಶವ ನಾಯ್ಕ್‌ ತೆಂಕಿಲ, ಶೋಭಾ ಬಾಲಕೃಷ್ಣ, ಅರ್ಪಣ ಪಡಿಲು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದ ಕೇಶವ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ರವೀಂದ್ರನಾಥ್ ಪಾಟೀಲ್ ಸ್ವಾಗತಿಸಿ, ಕೇಶವ ನಾಯ್ಕ್ ತೆಂಕಿಲ ಮಹಾಸಭೆಯ ನೋಟಿಸನ್ನು ಓದಿ ದಾಖಲಿಸಿದರು. ಮೋಹನ್ ಬೆದ್ರಾಳ ವಾರ್ಷಿಕ ವರದಿಯನ್ನು ಮಂಡಿಸಿ ಅಂಗೀಕಾರ ಪಡೆದರು. ಕೇಶವ ನಾಯಕ ತೆಂಕಿಲ ಹಾಗೂ ಕೇಶವ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಮಂಜೂರಾತಿ ಪಡೆದರು.

ಶಾರದ ಕೇಶವ ಅಂದಾಜು ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಶಿವಣ್ಣ ನಾಯ್ಕ್ ಆನೇಕಲ್ ಮಂಗಳೂರು ವಂದಿಸಿದರು.

LEAVE A REPLY

Please enter your comment!
Please enter your name here