ಅನಂತಾಡಿಯಲ್ಲಿ ‘ಕೆಸರ‍್ದ ಕಂಡೊಡು ಕುಸಲ್ದ ಗೊಬ್ಬು’ – ಜಿಲ್ಲಾಧಿಕಾರಿ ಭಾಗಿ

0

ಅನಂತಾಡಿ: ನವಭಾರತ್ ಫ್ರೆಂಡ್ಸ್ ಅನಂತಾಡಿ ಇದರ ಆಶ್ರಯದಲ್ಲಿ ಸೆ.22ರಂದು 6ನೇ ವರ್ಷದ ‘ಕೆಸರ‍್ದ ಕಂಡೊಡು ಕುಸಲ್ದ ಗೊಬ್ಬು’ ನೆಲ್ತೊಟ್ಟು ದೊಡ್ಡಮನೆ ಬಳಿಯ ಪಡಿಪಿರೆ ಗದ್ದೆಯಲ್ಲಿ ನಡೆಯಿತು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಟುಂಬ ಸಮೇತರಾಗಿ ಭಾಗವಹಿಸಿದ್ದಲ್ಲದೆ, ವಾಲಿಬಾಲ್, ಪಿಲಿನಲಿಕೆ, ಮುಂತಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಕುಟುಂಬ, ಭಾನುವಾರದ ರಜಾ ದಿನವನ್ನ ಕೆಸರಗದ್ದೆಯಲ್ಲಿ ಎಲ್ಲರೊಂದಿಗೆ ಬೆರೆತು ಕಳೆಯಿತು. ನೆಲ್ತೊಟ್ಟು ದೊಡ್ಡಮನೆ ರಾಮಕೃಷ್ಣ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕೆಸರು ಗದ್ದೆ ಉದ್ಘಾಟಿಸಿ ಆಟೋಟ, ಸ್ಪರ್ಧೆಗಳಿಗೆ ಚಾಲನೆ ನೀಡಿದರು.


ಕಿರಣ್ ಹೆಗ್ಡೆ, ರಾಮಣ್ಣ ಗೌಡ, ರಾಧಾಕೃಷ್ಣ ಮಾಸ್ಟರ್, ಗೋಪಾಲಕೃಷ್ಣ ಮಾಸ್ಟರ್, ಚಂದ್ರಹಾಸ್ ಮಾಣಿ, ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ರೂಪಲತಾ ತೀರ್ಥಪ್ರಸಾದ್, ಕೊಂಗಲಾಯಿ,ಧ್ವಜರೋಹಣ ನೆರವೇರಿಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ
https://youtu.be/JIQXPNOTZDw

LEAVE A REPLY

Please enter your comment!
Please enter your name here