ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ನಿಪುಣ್ ಪರೀಕ್ಷೆಯ ಸಿದ್ಧತಾ ಕಾರ್ಯಕ್ರಮವು ಸೆ.19ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಫಿಲೋಮಿನಾ ಕಾಲೇಜಿನ ಗಣಕಶಾಸ್ತ್ರ ಉಪನ್ಯಾಸಕರಾದ ಚಂದ್ರಾಕ್ಷ ಭಾಗವಹಿಸಿ ವಿದ್ಯಾರ್ಥಿಗಳಿಗೆ ಗಂಟುಗಳು, B.P Six ವ್ಯಾಯಾಮ, First Aid ಬ್ಯಾಂಡೆಜ್ ಇತ್ಯಾದಿಗಳನ್ನು ಕುರಿತು ತರಬೇತಿ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾl ವರದರಾಜ ಚಂದ್ರಗಿರಿ, ರೋವರ್ಸ್ ಮತ್ತು ರೇಂಜರ್ಸ್ ಸೇರುವುದರಿಂದ ಆಗುವ ಪ್ರಯೋಜನ ಅದರಲ್ಲಿ ನಾವು ಹೇಗೆ ಇರಬೇಕು ಮತ್ತು ನಮಗೆ ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ರೋವರ್ ಲೀಡರ್ ಆದ ಡಾl ತಿಮ್ಮಯರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು.ರೇಂಜರ್ಸ್ ಲೀಡರ್ ಮಂಜುಳಾ ದೇವಿ. ಪಿ ವಂದನಾರ್ಪಣೆ ಮಾಡಿದರು.
ರೇಂಜರ್ಸ್ ವಿದ್ಯಾರ್ಥಿ ಕುಮಾರಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.