ದರ್ಬೆಯಲ್ಲಿ ಪಾದಚಾರಿಗೆ ಆಂಬುಲೆನ್ಸ್ ಡಿಕ್ಕಿ, ಕೂರ್ನಡ್ಕ ನಿವಾಸಿಗೆ ಗಾಯ

0

ಪುತ್ತೂರು: ದರ್ಬೆ ಅಂಕಲ್ ಸ್ವೀಟ್ಸ್ ಬಳಿ ಆಂಬುಲೆನ್ಸ್ ವೊಂದು ಪಾದಚಾರಿಗೆ ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಸೆ.23 ರಂದು ಸಂಜೆ ನಡೆದಿದೆ.

ಘಟನೆಯಲ್ಲಿ ಕೂರ್ನಡ್ಕ ನಿವಾಸಿ ಮಾರ್ಸೆಲ್ ಡಿ’ಸೋಜ ಎಂಬವರು ಗಾಯಗೊಂಡವರು. ಗಾಯಗೊಂಡ ಮಾರ್ಸೆಲ್ ಡಿ’ಸೋಜರವರನ್ನು ಅದೇ ಆಂಬುಲೆನ್ಸ್ ನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಸಂಜೆ ಆಂಬುಲೆನ್ಸ್ ವೊಂದು ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಸೈರನ್ ನೊಂದಿಗೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಸೆಲ್ ಡಿ’ಸೋಜರವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಡಿಕ್ಕಿಯಾಗಿದೆ ಎನ್ನಲಾಗಿದ್ದು ಬಳಿಕ ಅದೇ ಆಂಬುಲೆನ್ಸ್ ನಲ್ಲಿ ಮೊದಲೇ ಇದ್ದಂತಹ ಗಾಯಾಳು ಸಮೇತ ಮಾರ್ಸೆಲ್ ಡಿ’ಸೋಜರವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here