ರೋಟರಿ ಸ್ವರ್ಣದಿಂದ ಮುಖ್ಯಮಂತ್ರಿ ಪದಕ ವಿಜೇತ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅದ್ರಾಮ್ ಎನ್.ರವರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ನಗರ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿತ್ತಿರುವ ಮುಖ್ಯಮಂತ್ರಿ ಪದಕ ವಿಜೇತ ಅದ್ರಾಮ ಎನ್ ಇವರಿಗೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಸನ್ಮಾನ ಕಾರ್ಯಕ್ರಮವು ಸೆ.26ರಂದು ರೋಟರಿ ಮನಿಷಾ ಹಾಲ್ ನಲ್ಲಿ ನಡೆಯಿತು.

2005ರಲ್ಲಿ ಮಂಗಳೂರಿನ ಉರ್ವ ಪೋಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ವೃತ್ತಿಯನ್ನು ಪ್ರಾರಂಭಿಸಿ ನಂತರ ಬಂಟ್ವಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2007 ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಹೊಂದಿ ಗ್ರಾಮಾಂತರ ಪೋಲಿಸ್ ಠಾಣೆ ಸಂಪ್ಯ ಪುತ್ತೂರು ಇಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕರ್ತವ್ಯ ಅವಧಿಯಲ್ಲಿ ಪೋಲಿಸ್ ಇಲಾಖೆಯಲ್ಲಿ ಹಲವಾರು ಪ್ರಮುಖ ಕ್ರಿಮಿನಲ್ ಪ್ರಕರಣವನ್ನು ಹಾಗೂ ಕೊಲೆ ಪ್ರಕರಣವನ್ನು ಭೇದಿಸಿ ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ಇವರ ಸೇವೆಯನ್ನು ಪರಿಗಣಿಸಿದ ಸರ್ಕಾರವು ಇವರಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ. ಇವರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿದ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣವು ಅದ್ರಾಮ ಎನ್.ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅದ್ರಾಮ ಎನ್ ಇವರು, ಇಂತಹ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಯು ನನ್ನ ಕರ್ತವ್ಯವನ್ನು ಪರಿಗಣಿಸಿ ನನ್ನನ್ನು ಆಭಿನಂದಿಸಿರುವುದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಮತ್ತು ನನಗೆ ಸಂತೋಷವಾಗಿದೆ ಎಂದು ತಿಳಿಸಿದರು. ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ನಿಜವಾದ ಕರ್ತವ್ಯ ನಿರ್ವಹಿಸಿದ ಸೇವಕನಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ ಎಂದರು. ಕ್ಲಬ್ ಪೂರ್ವಾಧ್ಯಕ್ಷರಾದ ಸುಂದರ ರೈ ಬಲ್ಕಾಡಿ ಶುಭಾಶಯವನ್ನು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಸುರೇಶ್ ಪಿ ಮಾತನಾಡಿ, ಅದ್ರಾಮ ಎನ್ ಇವರ ಜನಸ್ನೇಹಿ ಪೋಲಿಸ್ ಸೇವೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಇಂತಹ ನಿಷ್ಟಾವಂತ ಅಧಿಕಾರಿಗೆ ಈ ಪ್ರಶಸ್ತಿ ಬಂದಿರುವುದರಿಂದ ಪ್ರಶಸ್ತಿಯ ಗೌರವದ ಮೌಲ್ಯ ಹೆಚ್ಚಾಗಿದ್ದು, ಇದು ಇತರೇ ಪೋಲಿಸ್ ಸಿಬ್ಬಂದಿಗಳಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತವನ್ನು ಉಮೇಶ್ ಎಂ ಇವರು ಮಾಡಿದರು. ರೋಟರಿ ಪ್ರಾರ್ಥನೆಯನ್ನು ಪ್ರವೀಣ್ ರೈ ಸಾಂತ್ಯ ಇವರು ಮಾಡಿದರು. ವಾರದ ವರದಿಯನ್ನು ಕಾರ್ಯದರ್ಶಿ ಸೆನೋರಿಟಾ ಆನಂದ್ ಮಂಡಿಸಿದರು. ರಾಮಣ್ಣನವರ ರೈ ಕೈಕಾರ ವಂದಿಸಿದರು.

LEAVE A REPLY

Please enter your comment!
Please enter your name here