ತಿರುಪತಿ ಲಡ್ಡು ಪ್ರಕರಣ: ಕಾನೂನು ಕ್ರಮಕ್ಕೆ ಆಗ್ರಹ – ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾ ಸಂಘದಿಂದ ಪ್ರಧಾನ ಮಂತ್ರಿಗೆ ಮನವಿ

0

ಪುತ್ತೂರು: ತಿರುಪತಿ ಶ್ರೀ ಬಾಲಾಜಿ ದೇವಸ್ಥಾನದ ಲಡ್ಡಿನಲ್ಲಿ ದನದ ಕೊಬ್ಬು ಹಂದಿ ಕೊಬ್ಬು ಮೀನಿನ ಎಣ್ಣೆ ಬೆರೆಸಿ ಅಪವಿತ್ರ ಗೊಳಿಸಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ  ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ವತಿಯಿಂದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಲಡ್ಡು ಅಪವಿತ್ರಗೊಳಿಸಿ ಹಿಂದು ಧಾರ್ಮಿಕ ಶ್ರದ್ದೆಗೆ ಹೊಡೆತವಾಗಿದೆ. ಮನವಿ ಸಂದರ್ಭ ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ಜಿಲ್ಲಾ ಸಂಚಾಲಕ ಬಾಲಕೃಷ್ಣ ಗೌಡ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಅಧ್ಯಕ್ಷ  ಬೂಡಿಯಾರ್ ರಾಧಾಕೃಷ್ಣ ರೈ, ಬಾಲಚಂದ್ರ ಸೊರಕೆ, ಹಿಂದೂ ಜಾಗರಣ ವೇದಿಕೆಯ ಅವಿನಾಶ್ ಪುರುಷರಕಟ್ಟೆ, ಪ್ರಸಾದ್ ರೈ,  ವೇಣುಗೋಪಾಲ್ ಬೋಳುವಾರು, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀಪ್ರಸಾದ್, ಸೋಮನಾಥ್ ಬ್ರಹ್ಮನಗರ, ಶ್ರೀಧರ ಬಲ್ನಾಡು, ಆದರ್ಶ ರೈ ವಕೀಲರು, ವೆಂಕಪ್ಪಗೌಡ ಕೊಯ್ಯುರು, ತಾರನಾಥ ಗೌಡ, ಚಂದ್ರಶೇಖರ್ ಶಾಂತಿನಗರ, ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here