





ಪುತ್ತೂರು: ವಿಧಾನ ಪರಿಷತ್ ಉಪಚುನಾವಣೆಗೆ ಸಂಬಂಧಿಸಿ ಮಾದರಿ ನೀತಿ ಸಂಹಿತೆ ಇರುವ ಹಿನ್ನಲೆಯಲ್ಲಿ ಅ.10 ರಂದು ಪುತ್ತೂರು ಪರ್ಲಡ್ಕ ಬಾಲವನದಲ್ಲಿ ನಡೆಯಬೇಕಾಗಿರುವ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಕಾರಂತರ 123 ನೇ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.


ಈ ಹಿಂದೆ ಸೆ.18 ಕ್ಕೆ ಕಾರ್ಯಕ್ರಮ ನಡೆಸುವ ಕುರಿತು ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಸೆ.19 ರಂದು ವಿಧಾನ ಪರಿಷತ್ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಅ.28 ರ ತನಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಕಾರಂತ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿರುತ್ತದೆ.





ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಮುಂದಿನ ದಿನಗಳಲ್ಲಿ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸುವ ಬಗ್ಗೆ, ಸಭೆಯನ್ನು ಕರೆದು ದಿನಾಂಕವನ್ನು ನಿಗಧಿಪಡಿಸಲಾಗುವುದು ಎಂದು ಡಾ.ಶಿವರಾಮ ಕಾರಂತ ಬಾಲವನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










