ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವಠಾರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ 8 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ಸೆ. 29 ರಂದು ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಶಾಂತಿ ಮತ್ತು ನಮ್ಮಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ಇಂತಹ ಕ್ರೀಡೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ಯುವಕರು ಒಟ್ಟು ಸೇರಿ ಈ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಹೆಮ್ಮೆಯಾಗುತ್ತಿದ್ದು ಈ ಗ್ರಾಮದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ನಮ್ಮಿಂದಾಗುವ ಸಹಕಾರವನ್ನು ಗುತ್ತು ಮನೆಯಿಂದ ನೀಡುವುದಾಗಿ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಊರವರ ಸಹಕಾರದಿಂದ ನೂತನವಾಗಿ ನಿರ್ಮಿಸಿದ ಕೀರ್ತಿಶೇಷ ಜೀವಂಧರ ಆರಿಗ ವೇದಿಕೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಚಂದ್ರ ರೈ ಅನಾಜೆ, ಮಣಿ ಅರ್ಥ್ ಮೂವರ್ಸ್ ಮಾಲಕ ರಾಧಾಕೃಷ್ಣ ರೈ ಪಟ್ಟೆ, ಆಡಳಿತ ಮಂಡಳಿ ಸದಸ್ಯ ರಾಮಚಂದ್ರ ಮಣಿಯಾಣಿ ಬೊಳುಂಬುಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಾಗೇಶ ಗೌಡ ಪುಳಿತ್ತಡಿ ಸ್ವಾಗತಿಸಿ, ನಿರೂಪಿಸಿದರು. ಶರತ್ ಕುಮಾರ್ ಪುಳಿತ್ತಡಿ ವಂದಿಸಿದರು
ಗಣ್ಯರ ಭೇಟಿ;
ಶಾಸಕ ಅಶೋಕ್ ಕುಮಾರ್ ರೈ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ನೀತಿ ಸಂಹಿತೆ ಇದ್ದ ಕಾರಣ ಉದ್ಘಾಟನಾ ಕಾರ್ಯಕ್ರಮದ ನಂತರ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆನಂದ ರೈ ನರೈಮಾರ್, ಪ್ರಸನ್ನ ಕುಮಾರ್ ಮಾರ್ತ, ಅವಿನಾಶ್ ರೈ ಕುಡ್ಚಿಲ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಕುಮಾರ ನರಸಿಂಹ ಭಟ್ ಬುಳೆನಡ್ಕ, ಕೃಷ್ಣ ಪ್ರಸಾದ್ ಆಳ್ವ ಚೆಲ್ಯಡ್ಕ, ಗ್ರೇಟಾ ಡಿ’ ಸೋಜಾ ಮೊದಲಾದ ಗಣ್ಯರು ಭೇಟಿ ನೀಡಿದರು.
ಸುಮಾರು 52 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.ಕ್ರೀಡಾ ಕೂಟ ಸಂಯೋಜನೆ ಮಾಡಿದ ತಂಡದ ಯುವಕರು ಸಹಕರಿಸಿದರು.