ಪುತ್ತೂರು:ಪುತ್ತೂರು ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಅನುರಾಗ ವಠಾರದಲ್ಲಿ ಸೆ.28ರಂದು ನಡೆಯಿತು.
ಅಧ್ಯಕ್ಷತೆಯನ್ನು ಪುತ್ತೂರಿನ ದಂತವೈದ್ಯ, ಸಂಗೀತಪ್ರಿಯ, ಹಲವಾರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತ ಡಾ. ಶ್ರೀ ಪ್ರಕಾಶ್ ವಹಿಸಿ ತಮ್ಮ ಸ್ವಾನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ವೈವಿಧ್ಯಮಯ ಹಾಸ್ಯ ಪ್ರಸಂಗಗಳ ಮೂಲಕ ಪ್ರೇಕ್ಷಕರನ್ನು ನಗಿಸಿದರು.
ಸುದಾಮ ಕೆದಿಲಾಯ, ಪದ್ಮಾವತಿ ಭಟ್, ಸುಬ್ರಹ್ಮಣ್ಯ ಶರ್ಮ, ಶಂಕರಿ ಎಂ. ಎಸ್ ಭಟ್ ಮುಂತಾದವರು ತಮ್ಮ ನಗೆ ಚಟಾಕಿಗಳಿಂದ ಸಭಿಕರನ್ನು ರಂಜಿಸಿದರು.
ಮಾl ಸನ್ಮಯ್ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಸತ್ಯೇಶ್ ಕೆದಿಲಾಯ ಸ್ವಾಗತಿಸಿ, ಉಪಾಧ್ಯಕ್ಷಸುಬ್ರಹ್ಮಣ್ಯ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಉಪಕಾರ್ಯದರ್ಶಿಗಳಾದ ಅನ್ನಪೂರ್ಣೇಶ್ವರಿ ಅವರು ಕಾರ್ಯಕ್ರಮದ ಅಧ್ಯಕ್ಷರನ್ನು ಹೂಗುಚ್ಛವನ್ನಿತ್ತು ಸ್ವಾಗತಿಸಿದರು ಹಾಗೂ ಕಿರುಕಾಣಿಕೆ ನೀಡಿ ಅಧ್ಯಕ್ಷರನ್ನು ಗೌರವಿಸಲಾಯಿತು. ಕೊನೆಯಲ್ಲಿ, ಶ್ರೀಯುತ ಭಾಸ್ಕರರಾವ್ ಅವರ ಪ್ರಾಯೋಜಕತ್ವದಲ್ಲಿ ನೀಡಲ್ಪಟ್ಟ ಲಘ ಉಪಾಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.