ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೆ.ಶೇಖರ ರೈ ಕುರಿಕ್ಕಾರರವರು ಸೆ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಕುರಿಕ್ಕಾರ ದಿ.ರಾಮಣ್ಣ ರೈ ಮತ್ತು ದಿ.ಕಮಲರವರ ಪುತ್ರರಾಗಿರುವ ಇವರು ೦1.೦8.1987ರಿಂದ ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿ 1997 ರಲ್ಲಿ ಸಂಘಕ್ಕೆ ಸ್ವಂತ ನಿವೇಶನ ಹಾಗೂ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ. ಜಾನುವಾರು ಕೃತಕ ಗರ್ಭಧಾರಣೆಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಗರ್ಭಧಾರಣಾ ಇಂಜೆಕ್ಷನ್ ನೀಡಿದ್ದಾರೆ. ಪ್ರಗತಿಪರ ಕೃಷಿಕರೂ ಆಗಿರುವ ಇವರು ರೈತ ಸಂಘ ಕುಂಬ್ರ ವಲಯದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಇದಲ್ಲದೆ ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿ, ಕುಂಬ್ರ ವಿಶ್ವ ಯುವಕ ಮಂಡಲ, ಹಳೆ ವಿದ್ಯಾರ್ಥಿ ಸಂಘ ಕುಂಬ್ರ, ಜೇಸಿ ಸಂಸ್ಥೆ ಇದರ ಸಕ್ರೀಯ ಸದಸ್ಯರಾಗಿದ್ದಾರೆ. ತುಳು ನಾಟಕ ಕಲಾವಿದರಾಗಿ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಮಿಂಚಿದ್ದ ಇವರು ಶ್ರೀದೇವಿ ಮಹಾತ್ಮೆ ಯಕ್ಷಗಾನದಲ್ಲಿ ದೇವಿ ಪಾತ್ರ ಮಾಡಿದ್ದಾರೆ. ಪತ್ನಿ ಮನೋರಮರವರು ನಿಧನರಾಗಿದ್ದಾರೆ. ಪುತ್ರ ಕೆ.ಚರಣ್ ರೈಯವರು ಸೂರತ್‌ನಲ್ಲಿ ಎಲ್ & ಟಿ ಲಿಮಿಟೆಡ್ ಕಂಪೆನಿಯಲ್ಲಿ ಸೂಪರ್‌ವೈಸರ್ ಆಗಿದ್ದಾರೆ.
Home ಇತ್ತೀಚಿನ ಸುದ್ದಿಗಳು ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೆ.ಶೇಖರ ರೈ ಕುರಿಕ್ಕಾರ ಇಂದು ಸೇವಾ ನಿವೃತ್ತಿ