ಆರ್ಯಾಪು: ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆ

0

ಪುತ್ತೂರು: ಆರ್ಯಾಪು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ ಪುತ್ತೂರು ಹಾಗೂ ಗ್ರಾಮಪಂಚಾಯತ್ ಆರ್ಯಾಪು ಇವರ ಸಹಯೋಗದಲ್ಲಿ ಹುಚ್ಚು ನಾಯಿರೋಗದ ವಿರುದ್ಧ ಉಚಿತ ಲಸಿಕೆ ಶಿಬಿರ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪುತ್ತೂರು ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಅವರ ನೇತೃತ್ವದಲ್ಲಿ ಕೌಡಿಚ್ಚಾರು ಪ್ರಾ ಪ ಚಿ ಕೇಂದ್ರದ ಹಿರಿಯ ಪಶು ವೈದ್ಯ ಪರೀಕ್ಷಕ ವೀರಪ್ಪ ,ಪುತ್ತೂರು ಕಿರಿಯ ಪಶು ವೈದ್ಯ ಪರೀಕ್ಷಕ ಪುಂಡರಿಕಾಕ್ಷ , ಕೀರ್ತನ್ ಡಿ ಹಾಗೂ ರವಿ ಡಿ, ಆರ್ಯಾಪು ಪಶುಸಖಿ ದೀಪಿಕಾ ಇವರ ಸಹಕಾರದೊಂದಿಗೆ ಗ್ರಾಮದ ಸುಮಾರು 15 ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆಯನ್ನು ಯಶಸ್ವಿಯಾಗಿ ನಡೆಸಿದರು.

LEAVE A REPLY

Please enter your comment!
Please enter your name here