ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಬೊಟ್ಯಾಡಿಯವರು ಅ.2ರಂದು ಬೆಳಿಗ್ಗೆ ಪುತ್ತೂರಿನ ಹಲವು ದೇವಸ್ಥಾನಗಳು ಹಾಗೂ ಸಂಘದ ಹಿರಿಯರನ್ನೂ ಭೇಟಿ ಮಾಡಿದರು.
ಬೆಳಿಗ್ಗೆ ಪುತ್ತೂರಿಗೆ ಭೇಟಿ ನೀಡಿದ ಅವರು ಪ್ರಾರಂಭದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗಾಂಧೀಕಟ್ಟೆಗೆ ಭೇಟಿ ನೀಡಿ ಗಾಂಧಿ ಪ್ರತಿಮೆ ಮಾಲಾರ್ಪಣೆ ಮಾಡಿ ನಮಿಸಿದರು.
ಬಳಿಕ ಸರ್ವೆಯಲ್ಲಿರುವ ಅವರ ನಿವಾಸ, ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಡಾ. ಎಂ.ಕೆ ಪ್ರಸಾದ್, ಸಚಿನ್ ಟ್ರೇಡರ‍್ಸ್‌ನ ಮ್ಹಾಲಕ ಮಂಜುನಾಥ ನಾಯಕ್, ನ್ಯಾಯವಾದಿ ಶಿವಪ್ರಸಾದ್ ಇ., ಹಾಗೂ ಬಿರ್ಮಣ್ಣ ಗೌಡರವರ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ವಿರೂಪಾಕ್ಷ ಭಟ್, ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ ರಾವ್ ಬಪ್ಪಳಿಗೆ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ನಾಗೇಶ್ ಪ್ರಭು, ಉಪಾಧ್ಯಕ್ಷ ಸಂತೋಷ್ ರೈ ಕೈಕಾರ, ಅನಿಲ್ ಕುಮಾರ್ ತೆಂಕಿಲ, ಆರ್ಯಾಪು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗೇಶ್ ಟಿ.ಎಸ್., ಶಶಿಧರ್ ನಾಯ್ಕ, ನಗರ ಸಭಾ ಸದಸ್ಯೆ ವಿದ್ಯಾ ಗೌರಿ, ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷ ಶಿಶಿರ್ ಪೆರ‍್ವೋಡಿ, ನಗರ ಯುವ ಮೋರ್ಚಾದ ಅಧ್ಯಕ್ಷ ನೀತು, ಕಿರಣ್ ಬಲ್ನಾಡು, ಬಲ್ನಾಡು ಗ್ರಾ.ಪಂ ಅಧ್ಯಕ್ಷ ಪರಮೇಶ್ವರಿ ಭಟ್, ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಅಪ್ಪಯ್ಯ ಮಣಿಯಾಣಿ, ಮಾಧವ ಗೌಡ ಕಾಂತಿಲ, ಪೂರ್ಣೀಮಾ, ಪ್ರಕಾಶ್ ಕೆಲ್ಲಾಡಿ, ಅಶೋಕ್ ಪದವು, ಜಯಂತ ಬಾಯಾರು, ಸಚಿನ್ ಶೆಣೈ ಸೇರಿದಂತೆ ಹಲವು ಮಂದಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.