





ಪುತ್ತೂರು: ಬೆಳ್ಳಿಪ್ಪಾಡಿ ಅಂಗನವಾಡಿಯಲ್ಲಿ ಬಾಲ ವಿಕಾಸ ಸಮಿತಿ ಸೀಶಕ್ತಿ ಸಂಘಗಳ ಸಹಕಾರದೊಂದಿಗೆ ಪೌಷ್ಟಿಕಾಹಾರ ಸಪ್ತಾಹ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶಾಂತಿ ಟಿ ಹೆಗಡೆ, ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಹೆಗ್ಡೆಹಿತ್ಲು, ಶಿಕ್ಷಣ ಸಂಪನ್ಮೂಲ ಒಕ್ಕೂಟದ ಕಾರ್ಯದರ್ಶಿ ನಯನಾ ರೈ, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಚನಾ ಪಿ ಶೆಟ್ಟಿ, ಆಶಾ ಕಾರ್ಯಕರ್ತೆ ಮೋಹಿನಿ, ದಾನಿಗಳಾದ ಮಾರ್ಷೆಲ್ ವೇಗಸ್ ಉಪಸ್ಥಿತರಿದ್ದರು. ಶಾಂತಿ ಟಿ ಹೆಗಡೆಯವರ ನಿವೃತ್ತಿ ನೆಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ಪಶುಸಖಿ ಸ್ತ್ರೀ ಶಕ್ತಿ ಸದಸ್ಯೆ ಭವ್ಯ ವಿ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಮಲ್ಲಿಕಾ ಎಸ್ ಆಳ್ವ ವಂದಿಸಿ, ಸಹಾಯಕಿ ದಿವ್ಯ ಸಹಕರಿಸಿದರು. ಬಾಲವಿಕಾಸ ಸಮಿತಿಯ ಸದಸ್ಯರು, ಸೀ ಶಕ್ತಿ ಸಂಘಗಳ ಪದಾಽಕಾರಿಗಳು, ಸದಸ್ಯರು, ಮಕ್ಕಳ ಪೋಷಕರು, ಪುಟಾಣಿಗಳು ಹಾಜರಿದ್ದರು. 2023-24ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಕಪಾಟನ್ನು ಕೇಂದ್ರಕ್ಕೆ ನೀಡಿದರು.










