ಈಶ ವಿದ್ಯಾಲಯದಲ್ಲಿ 24ನೇ ವರ್ಷದ ಶಾರದ ಪೂಜೆ, ಆಯುಧ ಪೂಜಾ ಕಾರ್ಯಕ್ರಮ

0

ಪುತ್ತೂರು: ಈಶ ಎಜ್ಯುಕೇಶನಲ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ನ ಆಡಳಿತದಲ್ಲಿ ನಡೆಸಲ್ಪಡುವ ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು ಇದರ 24ನೇ ವರ್ಷದ ಶಾರದಾ ಪೂಜೆ, ಆಯುಧ ಪೂಜಾ ಕಾರ್ಯಕ್ರಮ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದುರ್ಗಾದೇವೀಯ ಪ್ರಧಾನ ಆರ್ಚಕ ವೇದಮೂರ್ತಿ ಉದಯಕೃಷ್ಣ ಭಟ್ ಇವರ ಸಾರಧ್ಯದಲ್ಲಿ ನಡೆಯಿತು.


ಈಶ ವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಶ್ರೀ.ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಬಳಿಕ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಹಿತೈಷಿಗಳು, ಹಿರಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು, ಈಶ ವಿದ್ಯಾಲಯದ ಪ್ರಾಂಶುಪಾಲ ಎಂ ಗೋಪಾಲಕೃಷ್ಣ , ಉಪಪ್ರಾಂಶುಪಾಲರಾದ ಶಾರದಾಕೃಷ್ಣ, ಸುಬ್ಬ ಪಾಟಾಳಿ ಗೋಳಿಕಟ್ಟೆ, ಶ್ರೀಶಕೃಷ್ಣ.ಜಿ.ಎಸ್,ಆಶ್ರೀಕೃಷ್ಣ.ಜಿ.ಎಸ್,ನೆಲ್ಲಿಕಟ್ಟೆ ಮಿತ್ರ ಮಂಡಲದ ಪದಾಧಿಕಾರಿಗಳು,ಪುತ್ತೂರು ನಗರಸಭಾ ನಾಮ ನಿರ್ದೇಶಿತ ಸದಸ್ಯ ರೋಶನ್ ರೈ, ದೇವಿಪ್ರಸಾದ್ ನೆಲ್ಲಿಕಟ್ಟೆ,ಬಾಲಕೃಷ್ಣ ನಾೖಕ್‌, ಜನಾರ್ಧನ ರಾವ್ ನೆಲ್ಲಿಕಟ್ಟೆ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿ ಸಿಬ್ಬಂದಿ ರವೀಂದ್ರ,ಕಾವಲು ಸಿಬ್ಬಂದಿ ಜಗದೀಶ್,ಪಿ.ಕೆ.ಗಣೇಶ್, ಸುದ್ದಿ ಬಿಡುಗಡೆಯ ಪ್ರಸರಣ ವಿಭಾಗದ ಮುಖ್ಯಸ್ಥರಾಗಿದ್ದ ಜಯರಾಂ ಭಟ್, ಪಿ.ಎಸ್ ಭಟ್, ಶಬರಿ ಆರ್ಟ್ಸ್‌ನ ಶಶಿ ಕುಮಾರ್ ನೆಲ್ಲಿಕಟ್ಟೆ, ಸುರೇಶ್ ನೆಲ್ಲಿಕಟ್ಟೆ, ಭಾರತ್ ಬ್ಯಾಗ್‌ನ ಮಾಲಕ ಜಾಬೀರ್, ಹನುಮಾನ್ ಏಜೆನ್ಸಿಯ ಮಾಲಕ ದಿನೇಶ್ ರೈ ಮಡಪ್ಪಾಡಿ, ಶ್ರೀ ಗಣಪತಿ ಜನರಲ್ ಸ್ಟೋರ್‌ನ ಮಾಲಕ ಅಭಿಲಾಷ್,ಶಿವಾನುಗ್ರಹ ಹೋಟೆಲ್‌ನ ಮಾಲಕ ಪ್ರಮೋದ್ ಪಾಟಾಳಿ, ಅನಿಲ್ ನ್ಯೂಟೆಕ್,ನಿವೃತ್ತ ಯೋಧ, ಯೂನಿಯನ್ ಬ್ಯಾಂಕ್ ಉದ್ಯೋಗಿ ಸುಬ್ಬಪ್ಪ ಪಾಟಾಳಿ, ವಾಣಿಯನ್ ಗಾಣಿಗ ಸಂಘ ಪುತ್ತೂರಿನ ಕಾರ್ಯದರ್ಶಿ ಜಯಲಕ್ಷ್ಮಿ.ಡಿ.ಎಸ್, ಸುಜಾತ ಚಂದ್ರಶೇಖರ್,ರೋಹಿತ್,ವಾಸುದೇವ ಗೌಡ,ಒಕ್ಕಲಿಗ ಗೌಡ ಸೇವಾ ಸಹಕಾರ ಸಂಘದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


ಭಜನಾ ಕಾರ್ಯಕ್ರಮಕ್ಕೆ ಹಾರ್ಮೋನಿಯಂನಲ್ಲಿ, ಸರಕಾರಿ ಆಸ್ಪತ್ರೆ ಪುತ್ತೂರು ಎಕ್ಸರೆ ಟೆಕ್ನಿಷಿಯನ್ ಪಕೀರ ಗೌಡ,ಲಿಂಗಪ್ಪ ಗೌಡ, ತಬಲದಲ್ಲಿ ಅಖಿಲೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here