ಪುತ್ತೂರು ಶಾರದೋತ್ಸವ- ’ಅಕ್ಷರ ಯಜ್ಞ’ ಪುಸ್ತಕ ಪಡೆದ ಸಂಸದ ಬ್ರಿಜೇಶ್ ಚೌಟ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಆಚರಿಸುವ ನವರಾತ್ರಿ ಪೂಜೆ ಮತ್ತು ಶ್ರೀ ಶಾರದೋತ್ಸವಕ್ಕೆ ಅ.5ರಂದು ಮಧ್ಯಾಹ್ನ ಆಗಮಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಶ್ರೀ ಶಾರದೋತ್ಸವದಲ್ಲಿನ ವಿಶೇಷ ’ಅಕ್ಷರ ಯಜ್ಞ’ ಪುಸ್ತಕವನ್ನುಪಡೆದು ಅ.9ರಂದು ಶ್ರೀ ಶಾರದೆಯ ಪ್ರತಿಷ್ಠೆಯ ಸಂದರ್ಭ ಸಮರ್ಪಿಸುವ ಸಂಕಲ್ಪ ಮಾಡಿಕೊಂಡಿದ್ದಾರೆ.


ಪುತ್ತೂರಿಗೆ ಭೇಟಿ ನೀಡಿದ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಪಕ್ಕದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರಕ್ಕೂ ಭೇಟಿ ನೀಡಿ ಮಧ್ಯಾಹ್ನದ ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಶಾರದೋತ್ಸವ ಸಮಿತಿ ಪದಾಧಿಕಾರಿಗಳಿಂದ ಅಕ್ಷರ ಯಜ್ಞದ ಮಾಹಿತಿ ಪಡೆದುಕೊಂಡು ಅಕ್ಷರ ಯಜ್ಞವನ್ನು ನಾನು ಮಾಡುತ್ತೇನೆಂದು ಪುಸ್ತಕ ಪಡೆದುಕೊಂಡು ಅ.9ರಂದು ಶ್ರೀ ದೇವರಿಗೆ ಸಮರ್ಪಣೆ ಮಾಡುವ ಸಂಕಲ್ಪ ಮಾಡಿಕೊಂಡರು.

ಈ ಸಂದರ್ಭ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿ ಗುತ್ತು ಸೀತಾರಾಮ ರೈಯವರು ಶಾಲು ಹೊದಿಸಿ ಗೌರವಿಸಿದರು. ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ರವರು ಅಕ್ಷರ ಯಜ್ಞ ಪುಸ್ತಕ ನೀಡಿದರು. ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ತಾರಾನಾಥ್ ಎಚ್, ಉಪಾಧ್ಯಕ್ಷ ಯಶವಂತ್ ಆಚಾರ್ಯ, ಜಲಜಾಕ್ಷಿ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷೆ ಲೀಲಾವತಿ, ಸದಸ್ಯೆ ದೀಕ್ಷಾ ಪೈ, ಚನಿಲ ತಿಮ್ಮಪ್ಪ ಶೆಟ್ಟಿ, ಎಸ್ ಅಪ್ಪಯ್ಯ ಮಣಿಯಾಣಿ, ಸುನೀಲ್ ಆಳ್ವ, ದಯಾನಂದ ಶೆಟ್ಟಿ ಉಜ್ರೆಮಾರ್, ಶಿವಕುಮಾರ್ ಪಿ.ಬಿ. ವಿರೂಪಾಕ್ಷ ಭಟ್, ಬಪ್ಪಳಿಗೆ ಚಂದ್ರಶೇಖರ ರಾವ್, ನಿತೇಶ್ ಕಲ್ಲೆಗ, ಹರಿಪ್ರಸಾದ್ ಯಾದವ್,ನವೀನ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here