ಬೆಟ್ಟಂಪಾಡಿ: ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ – ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಘಟಕದ ವತಿಯಿಂದ 12 ನೇ ವರ್ಷದ ಸಾಮೂಹಿಕ ದುರ್ಗಾಪೂಜೆ ಅ. 4 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ನಡೆಯಿತು. ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರಗಿದವು.
ಧಾರ್ಮಿಕ ಸಭೆ
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ವಿನಾಯಕ ಭಟ್ಟ ಗಾಳಿಮನೆಯವರು ಮಾತನಾಡಿ ‘ಸನಾತನ ಧರ್ಮ ಭಾರತದ ನೆಲದಲ್ಲಿ ಉಳಿದುದರ ಹಿಂದೆ ನಮ್ಮ ಪೂರ್ವಜರ ಪರಿಶ್ರಮವಿದೆ. ಅಂತಹ ಧರ್ಮರಕ್ಷಣೆಯಲ್ಲಿ ನಾವೆಲ್ಲಾ ನಿರಂತರ ತೊಡಗಿಸಿಕೊಳ್ಳಬೇಕಾದುದು ನಮ್ಮ ಧರ್ಮವಾಗಿದೆ’ ಎಂದರು.ಸಾಮೂಹಿಕ ಪೂಜಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಇರ್ದೆ ಬೀಡು ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವೇದಾವತಿ ಜೆ. ಬಲ್ಲಾಳ್, ಮುಂಬಯಿಯ ಎಮರ್ಸನ್ ನೆಟ್‌ವರ್ಕ್ ಪವರ್ ನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಲಕೃಷ್ಣ ಗೌಡ, ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಶೇಷಪ್ಪ ಪೂಜಾರಿ ರೆಂಜ, ಪುತ್ತೂರಿನ ಸಿವಿಲ್ ಇಂಜಿನಿಯರ್ ದಿಲೀಪ್ ರಾವ್ ಬೆಟ್ಟಂಪಾಡಿ ಪಾಲ್ಗೊಂಡರು.
ಮಾಜಿ ಸೈನಿಕರಿಗೆ ಸನ್ಮಾನ
ಕಾರ್ಯಕ್ರಮದ ಸಲುವಾಗಿ ಪ್ರತೀ ವರ್ಷ ಓರ್ವ ಮಾಜಿ ಸೈನಿಕರಿಗೆ ಗೌರವಾರ್ಪಣೆ ನಡೆಯುತ್ತಿದ್ದು, ಈ ಬಾರಿ ಭಾರತೀಯ ವಾಯುಸೇನೆಯ ನಿವೃತ್ತ ಜ್ಯೂನಿಯರ್ ವಾರಂಟ್ ಆಫೀಸರ್ ಗೋಪಾಲಕೃಷ್ಣ ಭಟ್ ಮಜಲುಗುಡ್ಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿ, ಝೀ ಕನ್ನಡ ಸರಿಗಮಪ ಸೀಝನ್ 20 ಯ ಸಂಗೀತ ಕಲಾವಿದೆ ಸಮನ್ವಿ ರೈ ಮದಕ ರವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ಉಪಸ್ಥಿತರಿದ್ದರು.ಸಮಿತಿಯ ಮಾಜಿ ಕಾರ್ಯದರ್ಶಿ ಸನತ್ ಕುಮಾರ್ ರೈ ಮತ್ತು ಸಂಜಯ ಬಲ್ಲಾಳ್ ಸನ್ಮಾನಪತ್ರ ವಾಚಿಸಿದರು.
ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕಿ ಶ್ರೀಮತಿ ರಕ್ಷಿತಾ ಪ್ರಾರ್ಥಿಸಿದರು. ಸಮಿತಿಯ ಮಾಜಿ ಅಧ್ಯಕ್ಷ ಸುವರ್ಣ ಆರ್.ಬಿ. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ ವಂದಿಸಿದರು. ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರಾದ ಶೇಖರ ಗೌಡ ಮಿತ್ತಡ್ಕ, ರಂಜಿತ್ ಚೂರಿಪದವು, ಮಾಲತಿ ಬಲ್ಲಾಳ್, ದೀಕ್ಷಿತ್ ಕಾಟುಕುಕ್ಕೆ, ಭಾರತಿ ಉಡ್ಡಂಗಳ, ಹೇಮಂತ್ ರೈ, ಸುಭಾಸ್ ಉಡ್ಡಂಗಳ, ಸಮಿತಿಯ ಕಾರ್ಯದರ್ಶಿ ಉಮೇಶ್ ಬಲ್ಲಾಳ್, ಕೋಶಾಧಿಕಾರಿ ಮನೋಜ್ ಕುಮಾರ್ ರೈ ಮುರ್ಕಾಜೆ ಅತಿಥಿಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.
ಶ್ರೀನಿಧಿ ನಾಸಿಕ್ ಬ್ಯಾಂಡ್ ಲೋಗೋ ಬಿಡುಗಡೆ
ಇದೇ ವೇಳೆ ಶ್ರೀನಿಧಿ ಚಾರಿಟೇಬಲ್ ಟ್ರಸ್ಟ್ ಶ್ರೀರಾಮನಗರ ರೆಂಜ ಇವರಿಂದ ಸಮಾಜದ ಅಶಕ್ತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಶ್ರೀನಿಧಿ ನಾಸಿಕ್ ಬ್ಯಾಂಡ್ ಲೋಕಾರ್ಪಣೆಗೊಂಡಿತು. ಅತಿಥಿಗಳು ಲೋಗೋ ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.