ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಅತಿ ವೃಷ್ಠಿಯಿಂದ ಜನ ಸಾಮಾನ್ಯರಿಗೆ ತುಂಬಾ ಕಷ್ಟವಾಗಿರುವುದುನ್ನು ಮನಗಂಡು ಲಯನ್ಸ್ ಪ್ರಾಂತ್ಯವು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಗೆ ವರದಿ ಮಾಡಿರುವುದರ ಫಲವಾಗಿ ಜಿಲ್ಲೆಗೆ ಸ್ವಲ್ಪ ಅನುದಾನ ಬಂದಿರುತ್ತದೆ. ಅಗತ್ಯವಿರುವ ಪ್ರದೇಶಗಳ ಬಡವರಿಗೆ ಅದರಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಗಿದೆ.
ಇದರಲ್ಲಿ ಪುತ್ತೂರು ಲಯನ್ಸ್ ಪ್ರಾಂತ್ಯ ನಾಲ್ಕರ ವ್ಯಾಪ್ತಿಗೆ ಸುಮಾರು 43 ಕಿಟ್ ಗಳು ಬಂದಿದ್ದು ಅದನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಲಯನ್ಸ್ ಪ್ರಾಂತ್ಯದ ಅಧ್ಯಕ್ಷರಾದ ಲಯನ್ ಪಾವನರಾಮರವರು ತಿಳಿಸಿದ್ದಾರೆ.