





ಪುತ್ತೂರು: ಕುಂಬ್ರ ವರ್ತಕರ ಸಂಘವು 2004 ಅ.10 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಂಡಿದ್ದು ಸಂಘಕ್ಕೆ ಅ.10 ಕ್ಕೆ 20 ವರ್ಷಗಳು ತುಂಬುತ್ತಿದ್ದು ಈ ಬಗ್ಗೆ ನ.16ರಂದು ಕುಂಬ್ರದಲ್ಲಿ 20ನೇ ವರ್ಷಾಚರಣೆ ‘ವರ್ತಕ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಅ.10ರಂದು ಬೆಳಿಗ್ಗೆ ಕುಂಬ್ರ ಕಟ್ಟೆಯ ಬಳಿ ಸಂಘದ ಸ್ಥಾಪನಾ ದಿನಾಚರಣೆ ಮತ್ತು ಅದೃಷ್ಟ ಚೀಟಿ ಬಿಡುಗಡೆ ಸಮಾರಂಭವು ನಡೆಯಲಿದೆ. ಕುಂಬ್ರ ಕೆಪಿಎಸ್ನ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರುರವರು ಅದೃಷ್ಟ ಚೀಟಿ ಬಿಡುಗಡೆ ಮಾಡಲಿದ್ದಾರೆ. ಸಾರ್ವಜನಿಕರು, ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












