ಬೈಲಂಗಡಿ: ರಸ್ತೆಗೆ ಬಿದ್ದ ಮರ-ಸಂಚಾರಕ್ಕೆ ಅಡ್ಡಿ

0

ನೆಲ್ಯಾಡಿ: ರಾಮಕುಂಜ-ಗೋಳಿತ್ತೊಟ್ಟು ರಸ್ತೆಯ ಬೈಲಂಗಡಿ ಎಂಬಲ್ಲಿ ಅ.9ರಂದು ಸಂಜೆ ವೇಳೆಗೆ ಮರವೊಂದು ಬಿದ್ದ ಪರಿಣಾಮ ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.


ಬೈಲಂಗಡಿ ಸಮೀಪ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಅರ್ಧತಾಸು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬಳಿಕ ಮೆಸ್ಕಾಂ ಪವರ್‌ಮ್ಯಾನ್ ಅವರ ಸಹಕಾರದಿಂದ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here