ಪುಣಚ : ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ 42ನೇ ವರ್ಷದ ಶ್ರೀ ಶಾರದೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.11 ಮತ್ತು 12ರಂದು ನಡೆಯಲಿದೆ.
ಅ.11ರಂದು ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಶಾರದಾ ಪ್ರತಿಷ್ಠೆ , ವಿವಿಧ ತಂಡಗಳಿಂದ ಭಜನಾರಂಭ, ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆರಂಭ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಾಯಂಕಾಲ 6.30ರಿಂದ ಶ್ರೀದೇವಿ ಶಿಶು ಮಂದಿರ ಮತ್ತು ದೇವಿನಗರ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9.30 ರಿಂದ ರಂಗಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ, 10ರಿಂದ ಯುವವೃಂದ ದೇವಿನಗರ ಇವರ ಪ್ರಾಯೋಜಕತ್ವದಲ್ಲಿ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ.
ಅ.12ರಂದು ಬೆಳಿಗ್ಗೆ ಪೂಜಾರಂಭ, ಭಜನಾರಂಭ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಶ್ರೀದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಪುಣಚ ಇವರಿಂದ ಯಕ್ಷಗಾನ “ಅತೀ ನೂತನ ಪ್ರಸಂಗ” ಸಾಯಂಕಾಲ ಶ್ರೀ ಶಾರದ ಮಾತೆಯ ವೈಭವೊಪೇತ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.