ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರಿನ ಪ್ರಧಾನ ಶಾಖೆಯಲ್ಲಿ ಶನಿವಾರ ವಿಜಯದಶಮಿ ಮತ್ತು ಕಿಂಕಿಣಿ(ಗೆಜ್ಜೆ) ಪೂಜಾ ಕಾರ್ಯಕ್ರಮ ಇಲ್ಲಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನೆರವೇರಿತು.
ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರು ವಿಜಯದಶಮಿ ಮತ್ತು ಕಿಂಕಿಣಿ ಪೂಜೆ ನೆರವೇರಿಸಿದರು. ಅಲಂಕೃತ ಶ್ರೀನಟರಾಜ ಮೂರ್ತಿ ಎದುರು ಪ್ರಾರ್ಥಿಸಿ, ಪೂಜಿಸಿ, ಆರತಿ ಬೆಳಗಿದರು. ಬಳಿಕ ಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಫಲಪುಷ್ಪ, ಅಕ್ಕಿ, ತೆಂಗಿನಕಾಯಿ, ಕಾಣಿಕೆಯನ್ನು ಸಮರ್ಪಿಸಿದರು. ನಂತರ ಗುರುಗಳಿಂದ ಆಶೀರ್ವಾದ ಪೂರ್ವಕ ಪಡೆದ
ಗೆಜ್ಜೆಯನ್ನು ಕಟ್ಟಿ ನೃತ್ಯದ ಅಧಿದೇವತೆ ನಟರಾಜನಿಗೆ ನಮಿಸಿ ನೃತ್ಯಾರ್ಚನೆ ನೆರವೇರಿಸಿದರು. ಈ ಸಂದರ್ಭ ಕಲಾ ಕೇಂದ್ರಕ್ಕೆ ಹೊಸ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಯಿತು.
ವಿಜಯ ದಶಮಿ ಮತ್ತು ಕಿಂಕಿಣಿ ಪೂಜೆ ಕಾರ್ಯಕ್ರಮದಲ್ಲಿ ಪುತ್ತೂರು, ವಿಟ್ಲ, ಮಂಗಳೂರು ಶಾಖೆಗಳ ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.