ರಂಗಪೂಜೆ, ಭಜನಾ ಸಂಕೀರ್ತನೆ, ಅನ್ನದಾನ
ಪುತ್ತೂರು: ಕಲ್ಪಣೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ೯ ದಿನಗಳ ನವರಾತ್ರಿ ಮಹೋತ್ಸವ ಅ.3ರಿಂದ ಅ.11ರ ವರೆಗೆ ವಿಜ್ರಂಭಣೆಯಿಂದ ನಡೆಯಿತು. ಗಣಪತಿ ದೇವರಿಗೆ ಗಣಹೋಮ, ಅಮ್ಮನವರಿಗೆ ನವಕಕಲಸ ಅಭಿಷೇಕ ನಾಗದೇವರಿಗೆ ಪೂಜೆ ನಂತರ ನವರಾತ್ರಿ ಮಹೋತ್ಸವ ಪ್ರಾರಂಭವಾಯಿತು.
ರಾಜರಾಜೇಶ್ವರಿ ಅಮ್ಮನವರಿಗೆ 9 ದಿನಗಳಲ್ಲಿ ಬೇರೆ ಬೇರೆ ಅಲಂಕಾರದಲ್ಲಿ ಭಕ್ತರಿಗೆ ದರ್ಶನವನ್ನು ನೀಡಿದರು. ದಿನಂಪ್ರತಿ ಅನ್ನದಾನ ಸೇವೆ ನಡೆಯಿತು. ಕ್ಷೇತ್ರದ ಪೂರ್ವ ಶಿಷ್ಟಾಚಾರದಂತೆ ಪ್ರಥಮ ದಿನ ಕ್ಷೇತ್ರದಿಂದ ಕ್ಷೇತ್ರದಿಂದಲೇ ರಂಗ ಪೂಜೆ ನಡೆಯುತ್ತದೆ. ನಂತರ ಭಕ್ತಾದಿಗಳ ಸೇವಾ ರೂಪದಲ್ಲಿ 9 ದಿನವೂ ರಂಗಪೂಜೆ ನಡೆಯಿತು. 9 ದಿನವೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ದಿನಂಪ್ರತಿ ಅಮ್ಮನವರಿಗೆ ಉಡಿಸಿದ ಸೀರೆಯನ್ನು ನವರಾತ್ರಿ ಪೂಜೆ ಮಾಡಿದ ಭಕ್ತರ ಹೆಸರನ್ನು ಚೀಟಿಯಲ್ಲಿ ಹಾಕಿ ಅದರಲ್ಲಿ ಒಂದು ಚೀಟಿಯನ್ನು ತೆಗೆದು ಆ ಚೀಟಿಯಲ್ಲಿ ಬಂದ ಹೆಸರಿಗೆ ಆ ದೇವರ ಸೀರೆಯನ್ನು ಅಮ್ಮನವರ ಪ್ರಸಾದ ರೂಪದಲ್ಲಿ 9 ದಿನವೂ ವಿತರಿಸಲಾಯಿತು. ಅ.11ರಂದು ಸಂಜೆ ಪರಿವಾರ ದೈವಗಳಿಗೆ ತಂಬಿಲ ಸೇವೆ ಮತ್ತು ರಾತ್ರಿ ಅಮ್ಮನವರಿಗೆ ರಂಗ ಪೂಜೆ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.