ನಿಡ್ಪಳ್ಳಿ; ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಪಾಣಾಜೆ ಇದರ ಆಶ್ರಯದಲ್ಲಿ 35 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.12 ರಂದು ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ಜರಗಿತು.
ಶಾರದೋತ್ಸವ ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತ ಬಿ.ರಾಮ್ ಕುಮಾರ್ ಉದ್ಘಾಟಿಸಿದರು. ಅ.ಭಾ.ವಿ.ಪ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು.ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಬೇಂಗದಪದವು ಶ್ರೀ ಗಿರಿಜಾಂಬ ಎ.ಎಲ್.ಪಿ ಶಾಲೆ ಮುಖ್ಯ ಗುರು ಶಿವಕುಮಾರ್ .ಎಸ್, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ಮೊಕ್ತೇಸರ ನಾರಾಯಣ ಮಣಿಯಾಣಿ ಮವ್ವಾರು, ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ವಿದ್ಯಾ ಮಣ್ಣಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಎಸ್.ಅರ್.ಟಿ.ಸಿ ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ತಮ್ಮಣ್ಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ;
ಬೊಳ್ಳಿಂಬಳ ನಾರ್ಣಪ್ಪಯ್ಯ ಮತ್ತು ದೇವಸ್ಯ ಚುಬ್ಬಜ್ಜರವರ ಸವಿನೆನಪಿಗಾಗಿ ಪೋಷಕ ಪ್ರೊತ್ಸಾಹಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಬೊಳ್ಳಿಂಬಳ ಸೀತಾಬಾಯಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ಶ್ರೀ ರಾಮ್ ಕುಮಾರ್ ಇವರ ಧರ್ಮಪತ್ನಿ ದಿ.ಸುಮಿತ್ರ ಇವರ ಸ್ಮರಣಾರ್ಥ ವಿಶಿಷ್ಟ ಶ್ರೇಣಿ ವಿದ್ಯಾರ್ಥಿ ವೇತನ, ಕ್ರಿಯಾತ್ಮಕ ಚಿಂತನೆ ವೈಜ್ಞಾನಿಕ ಜ್ಞಾನ ವಿಕಾಶಗಳಿಗಾಗಿ ಬಹುಮಾನ ವಿತರಿಸಲಾಯಿತು.ಅನ್ವಿತಾ ಎನ್ ಪ್ರಾರ್ಥಿಸಿ ಶಾರದೋತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ ರೈ ಕೋಟೆ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಉಪೇಂದ್ರ ಬಲ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಉಮೇಶ್ ಬಲ್ಯಾಯ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಗಣ್ಯರ ಉಪಸ್ಥಿತಿ;
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಸಂಸ್ಥಾಪಕ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಧಾರ್ಮಿಕ ಕಾರ್ಯಕ್ರಮಗಳು; ಬೆಳಿಗ್ಗೆ ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಟಾಪನೆ ನಡೆಯಿತು.ನಂತರ ಗಣಪತಿ ಹವನ ನಡೆದು ಶ್ರೀ ಕಾರ್ತಿಕೇಯ ಭಜನಾ ಸಂಘ ಆರ್ಲಪದವು ಇವರಿಂದ ಭಜನಾ ಕಾರ್ಯಕ್ರಮ, ಅಕ್ಷರಾಭ್ಯಾಸ ಹಾಗೂ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ಮಹಾಪೂಜೆ, ನಂತರ ವೈಭವದ ಶೋಭಾಯಾತ್ರೆ ಆರ್ಲಪದವು ಪೇಟೆಯಲ್ಲಿ ಸಾಗಿ ಬಂದು ಕೊಂದಲ್ಕಾನ ಶಾರದಾ ನದಿಯಲ್ಲಿ ಜಲಸ್ತಂಭನ ನಡೆಯಿತು.ವೇದಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು.
ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆ;
ಶ್ರೀ ಶಾಸ್ತಾರ ಸಿಂಗಾರಿ ಮೇಳ ಮಣಿಯೂರು, ದೇಲಂಪಾಡಿ ಇವರಿಂದ ಸಿಂಗಾರಿ ಮೇಳ. ಶ್ರೀ ನಿಧಿ ರೆಂಜ ಇವರ ಸೇವಾ ರೂಪದಲ್ಲಿ ನೀಡಿದ ನಾಸಿಕ್ ಬ್ಯಾಂಡ್ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪಾಣಾಜೆ ಗ್ರಾಮ ಸಮಿತಿ ಮತ್ತು ಟೈಗರ್ಸ್ ರೆಂಜ ಇವರ ಪ್ರಾಯೋಜಕತ್ವದಲ್ಲಿ ಪ್ರಸ್ತುತ ಪಡಿಸಿದ ಸ್ತಬ್ದ ಚಿತ್ರ ಶೋಭಾಯಾತ್ರೆಯ ಮೆರುಗನ್ನು ಇಮ್ಮಡಿ ಗೊಳಿಸಿತು.ಆಕರ್ಷಕ ಸುಡುಮದ್ದು ಪ್ರದರ್ಶನವೂ ಕಾರ್ಯಕ್ರಮಕ್ಕೆ ಇನ್ನಷ್ಟೂ ಕಳೆ ನೀಡಿತು.
ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು; ಬೆಳಿಗ್ಗೆ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಸೂರಂಬೈಲು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ” ಚಿಣ್ಣರ ಕಲರವ” ನಡೆಯಿತು.ಮಧ್ಯಾಹ್ನ ಸಹ್ಯಾದ್ರಿ ಕಾಲೇಜು ಮಂಗಳೂರಿನ ದಿವ್ಯನಿಧಿ ರೈ ಎರುಂಬು ಮತ್ತು ಬಳಗದಿಂದ ಸಂಗೀತ ಗಾನಸುಧೆ ನಡೆಯಿತು.ನಂತರ “ತ್ರಯೀ” ಸವಣೂರು ಇವರ ಸಂಯೋಜನೆಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ” ಸತ್ವ ಪರೀಕ್ಷೆ ” ನಡೆಯಿತು.