ಈಜು ಸ್ಪರ್ಧೆ: ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳು

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಯೋಜನೆಯಲ್ಲಿ ಅಕ್ಟೋಬರ್ 16ರಂದು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ 2024-25 ರಲ್ಲಿ ಸಂತ ಫಿಲೋಮಿನಾ ಪ.ಪೂ ಕಾಲೇಜಿನ 4 ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಪ್ರಥಮ ವಿಜ್ಞಾನ ವಿಭಾಗದ ಅನ್ವಿತ್ ರೈ ಬಾರಿಕೆ 4×100ಮೀ ಪ್ರೀಸ್ಟೆಲ್ ರಿಲೇಯಲ್ಲಿ ಒಂದು ಬೆಳ್ಳಿ ಮತ್ತು 50ಮೀ ಬಟರ್ ಫ್ಲೆಯಲ್ಲಿ ಒಂದು ಕಂಚಿನ ಪದಕ, ಪ್ರಧಿ ಕ್ಲಾರೆ ಪಿಂಟೋ 200ಮೀ ಬ್ಯಾಕ್ ಸ್ಟ್ರೋಕ್, 4×100ಮೀ ಫ್ರೀ ಸ್ಟೈಲ್ ರಿಲೇ ಹಾಗೂ 4×100ಮೀ ಐಎಂ ರಿಲೇಯಲ್ಲಿ ಕಂಚಿನ ಪದಕ, ಹಾಗೂ ದಿಗಂತ್ ವಿ ಎಸ್ 4×100ಮೀ ಮೆಡ್ಲೆ ರಿಲೇ ಒಂದು ಬೆಳ್ಳಿಯ ಪದಕವನ್ನು ಪಡೆದುಕೊಂಡಿರುತ್ತಾರೆ. ಅರ್ ಅಮನ್ ರಾಜ್ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.


ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್ ಮತ್ತು ದೀಕ್ಷಿತ್ ರಾವ್ ರವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here