ಮಾದಕ ವಸ್ತು ಸೇವಿಸಿ ಅನುಚಿತ ವರ್ತನೆ- ಆರೋಪಿಯ ಬಂಧನ

0

ಪುತ್ತೂರು: ಸಾಲ್ಮರ ಸಮೀಪ ಮಾದಕ ವಸ್ತು ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಯುವಕನೋರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಸಾಲ್ಮರ ನಿವಾಸಿ ಅಹಮ್ಮದ್‌ ಕಬೀರ್(‌ 22ವ) ಬಂಧಿತ ಆರೋಪಿ. ಪೊಲೀಸರು ರೌಂಡ್ಸ್‌ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾಲ್ಮರದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಆತನನ್ನು ವಿಚಾರಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here