ವಿದ್ಯಾಮಾತಾ ರಾಷ್ಟ್ರೀಯ ಮಿಲಿಟರಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪ್ರಾರಂಭ-ಆನ್ಲೈನ್ ಮೂಲಕ ತರಬೇತಿ ನೀಡಲಿರುವ ಅಕಾಡೆಮಿ…

0

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯು ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆ(RMS)ಗೆ ಪೂರ್ವಭಾವಿಯಾಗಿ ತರಬೇತಿಯನ್ನು ಸದ್ಯದಲ್ಲೇ ಪ್ರಾರಂಭಿಸಲಿದ್ದು , ಈಗಾಗಲೇ ದಾಖಲಾತಿ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಿದೆ.


ಅಕಾಡೆಮಿಯು ಈಗಾಗಲೇ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿಯುತ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ , ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಷ್ಟ್ರೀಯ ಮಿಲಿಟರಿ ಶಾಲೆ(RMS) ಪರೀಕ್ಷೆಯ ತರಬೇತಿ ತರಗತಿಗಳು ವಾರದಲ್ಲಿ 5ದಿನ ರಾತ್ರಿ ಗಂಟೆ 8.00ರಿಂದ 9.00ರ ವರೆಗೆ ಆನ್ಲೈನ್ ಮೂಲಕ ನಡೆಯಲಿದ್ದು,ಆಸಕ್ತ ಅಭ್ಯರ್ಥಿಗಳು ಈ ತರಗತಿಗಳ ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.


ಇನ್ನೂ ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆಕೊಳ್ಳಬಹುದು. ದಾಖಲಾತಿ ಪಡೆದುಕೊಳ್ಳಲು ಅಥವಾ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ. 9148935808 , 9448527606 ಅಥವಾ 96204 68869 ಮಾಹಿತಿಗಾಗಿ.

LEAVE A REPLY

Please enter your comment!
Please enter your name here