ರಾಮಕುಂಜ: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ (ಆಡಳಿತ) ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಡೂರು ಆಶ್ರಯದಲ್ಲಿ ಕೇಂಬ್ರಿಜ್ ಪಬ್ಲಿಕ್ ಸ್ಕೂಲ್ ಪುರ, ಕಡೂರು ಇವರ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣ, ಕಡೂರು ಇಲ್ಲಿ ಅ.15ರಿಂದ 1ರವರೆಗೆ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢಶಾಲಾ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿನಿಯರಾದ ಧನ್ವಿ ಎಂ (ಮನೆಜಾಲು ದುಗ್ಗಣ್ಣ ಗೌಡ ಹಾಗೂ ಅಮಿತಾ ದಂಪತಿ ಪುತ್ರಿ ), ದೀಕ್ಷಾ ಎಸ್ ( ತಿಂಗಳಾಡಿ ಶಿವಪ್ರಸಾದ್ ಎ ಹಾಗೂ ಅನುಪಮಾ ದಂಪತಿ ಪುತ್ರಿ ), ರಮ್ಯಾ ಕೆ.ಎಸ್ ( ಕರಡಿಹಳ್ಳಿ ಶಶಿಧರ ಕೆ ವಿ ಹಾಗೂ ಪ್ರೇಮ ಬಿ ಎಂ ದಂಪತಿ ಪುತ್ರಿ ), ಸಿಂಚನ ಎಸ್ ( ನಗ್ರಿ ಶಿವಾನಂದ ಹಾಗೂ ಶಾಲಿನಿ ದಂಪತಿ ಪುತ್ರಿ ), ತನ್ವಿ ಕೆ ಸಿ ( ಕಜಿಪಿತ್ತಿಲ ಚಂದ್ರ ಕೆ ಹಾಗೂ ಯೋಗಿತಾ ಕೆ ದಂಪತಿ ಪುತ್ರಿ ), ಪ್ರತೀಕ್ಷಾ ( ಗುಜ್ಜಾಲ ಭುವನೇಶ್ವರ ಹಾಗೂ ಪ್ರೇಮ ದಂಪತಿ ಪುತ್ರಿ ), ಶಾಯದ ಕಜೇಸಾಬ್ ಕೊರಬು ( ಬಿಜಾಪುರ ಖಾಜಾಸಾಬ್ ಹಾಗೂ ಮಮ್ತಾಜ್ ದಂಪತಿ ಪುತ್ರಿ ), ತೃಷಾ ( ಕೊಲ್ಯ ವೆಂಕಪ್ಪ ಮತ್ತು ಸುಜಾತ ದಂಪತಿ ಪುತ್ರಿ ), ಸಿಂಚನ (ಕೊಂಡಾಣ ನವೀನ್ ಮತ್ತು ಚಂದ್ರಾವತಿ ದಂಪತಿ ಪುತ್ರಿ ), ಸುಪೇಕ್ಷಾ ಎಸ್ ( ತಲಪಾಡಿ ಸತೀಶ್ ಮತ್ತು ಪ್ರೇಮಲತಾ ದಂಪತಿ ಪುತ್ರಿ ), ದಿಶಾ ( ಮಾಡೂರು ಸುನಿಲ್ ಮತ್ತು ಸುಜಾತ ದಂಪತಿ ಪುತ್ರಿ ), ಮನಸ್ವಿ ( ಕೊಲ್ಯ ಧನುಕ್ಷ ಮತ್ತು ನಾಗರತ್ನ ದಂಪತಿ ಪುತ್ರಿ ) ತಂಡವನ್ನು ಪ್ರತಿನಿಧಿಸಿದ್ದರು.
ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಶ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಅವರು ಮಾರ್ಗದರ್ಶನ ನೀಡಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್ ಹಾಗೂ ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳು,ಪೋಷಕರು ಸಹಕರಿಸಿದ್ದರು.
ಹಣಾಹಣಿ
ಮೈಸೂರು ವಿಭಾಗ ವ್ಯಾಪ್ತಿಯ ಜಿಲ್ಲೆಗಳಿಂದ ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡವು ಪ್ರಥಮ ಪಂದ್ಯದಲ್ಲಿ ಚಾಮರಾಜನಗರ ತಂಡದ ಜೊತೆ 35 – 5, ಮಂಡ್ಯ ತಂಡದ ಜೊತೆ 39 – 17 ಹಾಗೂ ಫೈನಲ್‌ನಲ್ಲಿ ಉಡುಪಿ ತಂಡದ ಜೊತೆ 53-24ರ ಗರಿಷ್ಠ ಅಂತರದಿಂದ ಗೆದ್ದುಕೊಂಡಿದೆ.