ಆಲಂಕಾರಿನಲ್ಲಿ ಮದ್ಯ ಮಾರಾಟ ಶಂಕೆ ಪೊಲೀಸರಿಂದ ದಾಳಿ

0

ಆಲಂಕಾರು: ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರತಿ ಗ್ರಾ.ಪಂ ಗೆ ಬಿಗಿ ಬಂದೋಬಸ್ತ್ ನೀಡುತ್ತಿದ್ದು ಈ ಸಂದರ್ಭದಲ್ಲಿ ಆಲಂಕಾರು ಪೇಟೆಯ ಬಾರ್ ಪಕ್ಕದಲ್ಲಿರುವ ಸ್ಟೋರ್ ಮುಂದುಗಡೆ ಜನರ ಜಮಾವಣೆಯನ್ನು ಗಮನಿಸಿದ ಕಡಬ ಉಪನೀರಿಕ್ಷಕ ಅಭಿನಂದನ್ ಮತ್ತು ಪೊಲೀಸರ ತಂಡ ಮದ್ಯ ಮಾರಾಟದ ಶಂಕೆಯ ಮೇಲೆ ಅಂಗಡಿಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಂಗಡಿಯವರ ದೈನಂದಿನ ಬಳಕೆಗೆ ಉಪಯೋಗಿಸಿದ ಮದ್ಯದ ಪ್ಯಾಕೇಟ್ ಮತ್ತು ಗ್ಲಾಸ್ ಪತ್ತೆಯಾಗಿದ್ದು, ಅನಗತ್ಯವಾಗಿ ಜನ ಸೇರದಂತೆ ಪೊಲೀಸರು ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here