ನಾಳೆ (ಅ.22) ಕೇಪುಳುವಿನಲ್ಲಿ ಐಕಾನಿಕ್ ಟೈಲ್ ಗ್ಯಾಲರಿ ಉದ್ಘಾಟನೆ…

0

ಪುತ್ತೂರು : ಪ್ರತಿಷ್ಠಿತ ಬ್ರ್ಯಾಂಡೆಡ್ ಟೈಲ್ಸ್ ಮತ್ತು ಸ್ಯಾನಿಟರಿ ಸಾಮಗ್ರಿಗಳನ್ನೊಳಗೊಂಡ ಮಾರಾಟ ಮಳಿಗೆ ಐಕಾನಿಕ್ ಟೈಲ್ ಗ್ಯಾಲರಿ ಅ.22 ರಂದು ಇಲ್ಲಿನ ಕೇಪುಳು ಸರ್ಕಲ್ ಸಮೀಪದ ಶ್ರೀ ಗುರು ಆರ್ಕೇಡ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾ‌ರ್ ರೈ ಪಾಲ್ಗೊಳ್ಳಲಿದ್ದು , ಮುಖ್ಯ ಅತಿಥಿಗಳಾಗಿ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಕೆಥೋಲಿಕ್ ಸಭಾ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವೆಸ್, ಸಾಲ್ಮರ ಸಯ್ಯದ್ ಮೂಲೆ ಜುಮಾ ಮಸೀದಿ ಖತೀಬ್ ಪಿ.ಎಂ.ಉಮ್ಮರ್ ದಾರಿಮಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ ಭಾಗವಹಿಸಲಿದ್ದು , ಗೌರವ ಉಪಸ್ಥಿತಿಯಲ್ಲಿ ಪುತ್ತೂರು ದ್ವಾರಕ ಕನ್‌ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್, ಮಾಸ್ಟರ್ ಫ್ಲಾನರಿ ನಿರ್ದೇಶಕ ಅಕ್ಷಯ್ ಎಸ್.ಕೆ., ಕೆವಿಜಿ ಮೆಡಿಕಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಕ್ಷಯ್ ಕೆ.ಸಿ., ನಿರ್ಮಾಣ್ ಅಸೋಸಿಯೇಟ್ಸ್ ಮಾಲಕ ಸಚ್ಚಿದಾನಂದ, ಶ್ರೀ ಗುರು ಆರ್ಕೇಡ್ ಮಾಲಕ ಅರುಣ್ ಕುಮಾರ್ ಉಪಸ್ಥಿತರಿರಲಿದ್ದಾರೆ.

ಐಕಾನಿಕ್ ಟೈಲ್ ಗ್ಯಾಲರಿಯು ಕಣ್ಣೂರಿನ ಕರಿವೆಲ್ಲೂರ್ ನಲ್ಲಿ ಐಕಾನಿಕ್ ಸೆರಾಮಿಕ್ಸ್ ಮಾತೃ ಸಂಸ್ಥೆಯನ್ನು ಹೊಂದಿದ್ದು , ಕಾಸರಗೋಡಿನ ಛಯ್ಯೊಂಮ್ ಬಳಿ ತನ್ನ ಮೊದಲ ಶಾಖೆಯನ್ನು ಆರಂಭಿಸಿ ಕಳೆದ ಕೆಲ ವರ್ಷಗಳಿಂದ ವಿಶ್ವಾಸಾರ್ಹ ವ್ಯವಹಾರ ಮೂಲಕ ಗ್ರಾಹಕ ಜನತೆಯ ಮನ ಗೆದ್ದಿದೆ. ಇದೀಗ ತನ್ನ ಎರಡನೆಯ ಶಾಖೆಯನ್ನು ಪುತ್ತೂರು ಹಾಗೂ ಸುತ್ತಲಿನ ತಾಲೂಕು ಕೇಂದ್ರಗಳ ಜನರ ಬೇಡಿಕೆ ಮೇರೆಗೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಪುತ್ತೂರಿನಲ್ಲೂ ವ್ಯವಹಾರ ಪ್ರಾರಂಭಿಸಿದೆ.‌


ಮಳಿಗೆಯಲ್ಲಿ ಬ್ರ್ಯಾಂಡೆಡ್ , ಐಷರಾಮಿ ಟೈಲ್, ಸ್ಯಾನಿಟರಿ ಸಾಮಗ್ರಿಗಳನ್ನು ಪ್ರಮುಖ ಉತ್ಪಾದಕ ಸಂಸ್ಥೆಗಳಾದ ಕಜಾರಿಯಾ, ರ್ಯಾಕ್ , ಹಿಂದ್ವೇರ್, ಸೇರಾ , ಸೋಮಾನಿ, ವಿಟೇರೋ, ಜಾನ್ಸ್ಸನ್ ಹಾಗೂ ಇತರ ಟೈಲ್ಸ್ ಉತ್ಪಾದಕರಿಂದ ನೇರ ಖರೀದಿ ಮೂಲಕ ಗ್ರಾಹಕರಿಗೆ ನೀಡುತ್ತದೆ.


ಬಾತ್ ರೂಂ, ಮಾಡ್ಯೂಲರ್ ಕಿಚನ್ ಫಿಟ್ಟಿಂಗ್ಸ್ ಇಂಟೀರಿಯರ್ ಸಾಮಗ್ರಿಗಳೆಲ್ಲಾ ಅತ್ಯುತ್ತಮ ದರದಲ್ಲಿ ಸದಾ ಲಭ್ಯವಿದೆಯೆಂದು ಸಂಸ್ಥೆಯ ಆಡಳಿತ ನಿರ್ದೇಶಕಿ ಪ್ರೇಮಲತಾ ಎಂ., ನಿರ್ದೇಶಕರಾದ ರೇವತಿ ಸುಭಾಷ್ ಚಂದ್ರಬೋಸ್ ಮತ್ತು ರಮೇಶ್ ನೆನ್ನಣಿ ತಿಳಿಸಿದ್ದಾರೆ. ಮಾಹಿತಿಗಾಗಿ 9633422699/ 9846616071 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here