





ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಡಿ.18ರಿಂದ 23ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವಾಲಯದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ನಾವೆಲ್ಲರೂ ಸಂಘಟನಾತ್ಮಕವಾಗಿ ದುಡಿದಾಗ ಮಾತ್ರ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲು ಸಾಧ್ಯ. ದೇವಾಲಯಗಳು ಉಳಿದರೆ ಹಿಂದುತ್ವ ಉಳಿದಂತೆ. ಆದ್ದರಿಂದ ಹೆಸರಿಗಾಗಿ ಕೆಲಸ ಮಾಡದೇ ದೇವರ ಮೇಲಿನ ಭಕ್ತಿಯಿಂದ ನಿಸ್ವಾರ್ಥ ಸೇವೆ ಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳೋಣ ಎಂದರು.





ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಹತ್ತು ಕುಟುಂಬಗಳು ಒಂದಾಗಿ ಭಗವಂತನ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳೋಣ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಣಿಕ್ಕಳ ಜಗದೀಶ ರಾವ್ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ಇನ್ನು ಹೆಚ್ಚು ದಿನ ಉಳಿದಿಲ್ಲ. ಆದ್ದರಿಂದ ಎಲ್ಲರೂ ಅವರವರಿಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಭಗವಂತ ಸೇವೆಗೆ ಎಲ್ಲರೂ ಒಂದಾಗಬೇಕು. ಇಲ್ಲಿಗೆ ಬರುವ ಪರವೂರ ಭಕ್ತರು ಇಲ್ಲಿಗೆ ಬಂದು ತೆರಳುವಾಗ ಸಂತೃಪ್ತ ಭಾವ ಹೊಂದಿರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್, ಗ್ರಾಮ ದೇವಾಲಯಗಳು ಜೀರ್ಣೋದ್ಧಾರಗೊಂಡಾಗ ಮಾತ್ರ ಗ್ರಾಮವು ಅಭಿವೃದ್ದಿಯನ್ನು ಕಾಣಲು ಸಾಧ್ಯ. ನಾವೆಲ್ಲರೂ ಒಂದೇ ಮನೆಯವರಂತೆ ಒಗ್ಗೂಡಿ ಈ ಬ್ರಹ್ಮಕಲಶೋತ್ಸವ ಸಮಾರಂಭವನ್ನು ಯಶಸ್ಸಿವಾಗಿ ನಡೆಸೋಣ. ಈ ಮೂಲಕ ಶ್ರೀ ದೇವರ ಪ್ರೀತಿಗೆ ಪಾತ್ರರಾಗೋಣ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಉಪಾಧ್ಯಕ್ಷ ಪ್ರತಾಪ್ ಯು. ಪೆರಿಯಡ್ಕ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ್ ಗೌಂಡತ್ತಿಗೆ, ದೇವಾಲಯದ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್ ಕೂವೆಚ್ಚಾರು, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಪೂಜಾರಿ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ಅವನೀಶ್ ಪೆರಿಯಡ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಿರೀಶ ಆರ್ತಿಲ, ಸೇಸಪ್ಪ ಗೌಡ ಬೊಳ್ಳಾವು, ಪ್ರಶಾಂತ ಯು. ಪೆರಿಯಡ್ಕ, ಹರಿಪ್ರಸಾದ್ ಕೂವೆಚ್ಚಾರು, ವಿವಿಧ ಸಮಿತಿಯ ಪದಾಧಿಕಾರಿಗಳಾದ ಧರ್ಣಪ್ಪ ನಾಯ್ಕ ಬೊಳ್ಳಾವು, ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಸವಿತಾ ಕೋಡಿ, ಶ್ರೀಮತಿ ಸುಜಾತಕೃಷ್ಣ, ಮಹಾಲಿಂಗ ಕಜೆಕ್ಕಾರು, ಶೀನಪ್ಪ ಗೌಡ ಬೊಳ್ಳಾವು, ಮಂಜುನಾಥ ಭಟ್ ಪಿ., ಜಗದೀಶ ಕಂಪ, ವಸಂತ ನಾಯ್ಕ್ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ವಸಂತ ಕುಂಟಿನಿ, ಹರೀಶ್ ನಾಯಕ್ ನಟ್ಟಿಬೈಲು, ರಾಮಚಂದ್ರ ಗೌಡ ನೆಡ್ಚಿಲು, ಜಗದೀಶ್ ಪೂಜಾರಿ ಪರಕಜೆ, ವೀರಪ್ಪ ಗೌಡ ಪುಳಿತ್ತಡಿ ಮತ್ತಿತರರು ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರೆಮಜಲು ಸ್ವಾಗತಿಸಿ, ವಂದಿಸಿದರು.










