ಕ್ರೀಡಾಕೂಟ-ಈಶ್ವರಮಂಗಲ ಶ್ರೀ ಗಜಾನನ ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ಪುತ್ತೂರು: ಅ.22ರಂದು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ, ಪ್ರಾಥಾಮಿಕ ಶಾಲಾ ಬಾಲಕ ಬಾಲಕಿಯರ ವಿಭಾಗದಲ್ಲಿ ಈಶ್ವರಮಂಗಲ ಶ್ರೀ ಗಜಾನನ ಹಿರಿಯ ಪ್ರಾಥಾಮಿಕ ಶಾಲೆಯ 7ನೇ ತರಗತಿಯ ಜಿ.ಕೆ ಅಶ್ವಿತ್‌ ಉದ್ದಜಿಗಿತದಲ್ಲಿ ಪ್ರಥಮ,100ಮೀ ಓಟದಲ್ಲಿ ತೃತೀಯ, ಅಶ್ಮ 100 ಮೀಟರ್‌ ಓಟದಲ್ಲಿ ದ್ವಿತೀಯ, 200 ಮೀಟರ್‌ ಓಟದಲ್ಲಿ ತೃತೀಯ, ಶ್ರೀಪ್ರೀಯ ಎತ್ತರ ಜಿಗಿತದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ, ಯೊಗೀಶ್‌ 400 ಮೀಟರ್‌ ಓಟದಲ್ಲಿ ದ್ವಿತೀಯ, ಶನ್ಮಿತ 600 ಮೀಟರ್‌ ಓಟದಲ್ಲಿ ದ್ವಿತೀಯ ಹಾಗೂ ನಿತಿನ್‌ 600 ಮೋಟರ್‌ ಓಟದಲ್ಲಿ ತೃತೀಯ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here